ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ನೀಲಗಾರ ಸಣ್ಣ ಶೆಟ್ಟಿ ನಿಧನ

ಚಾಮರಾಜನಗರ: ತಾಲೂಕಿನ ದೊಡ್ಡ ಮೊಳೆ ಗ್ರಾಮದ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರೂ ಜನಪ್ರಿಯ ಜಾನಪದ ಕಲಾವಿದರಾದ ನೀಲಗಾರ ಸಣ್ಣ ಶೆಟ್ಟಿ ಅವರ ಬೆಳಿಗ್ಗೆ ಸ್ವಗ್ರಾಮದಲ್ಲಿ ನಿಧನ ಹೊಂದಿದ್ದಾರೆ.

ಮೃತರು ಪತ್ನಿ ಇಬ್ಬರು ಗಂಡು ಮಕ್ಕಳು ಒಬ್ಬರು ಹೆಣ್ಣು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಅವರು ಕೆಲವು ತಿಂಗಳಿನಿಂದ ಅನಾರೋಗ್ಯ ಪೀಡಿತರಾಗಿದ್ದರು.ಚಿಕಿತ್ಸೆ ಫಲಿಸದೆ ಗುರುವಾರ ಬೆಳಿಗ್ಗೆ ಮೃರಪಟ್ಟಿದ್ದಾರೆ.ಅವರಿಗೆ 64‌ವರ್ಷಗಳಾಗಿತ್ತು.

ಶುಕ್ರವಾರ ಬೆಳಿಗ್ಗೆ ಅವರ ಸ್ವಗ್ರಾಮದಲ್ಲಿ  ಅಂತ್ಯಕ್ರಿಯೆ ನೆರವೇರಲಿದೆ.

ಸಂತಾಪ- ಜಾನಪದ ಕಲಾವಿದ ಸಣ್ಣ ಶೆಟ್ಟಿ ಅವರ ನಿಧನಕ್ಕೆ ಚಾಮರಾಜನಗರ ಜಿಲ್ಲಾ ಉಪ್ಪಾರ ಯುವಕರ ಸಂಘದ ಜಿಲ್ಲಾಧ್ಯಕ್ಷ ಎಂ ಜಯಕುಮಾರ್ ಅವರು  ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಮೃತರು ಮಲೆ ಮಾದೇಶ್ವರ ಮಂಟೇಸ್ವಾಮಿ ಬಿಳಿರಂಗ ಸ್ವಾಮಿ ಕಾವ್ಯಗಳನ್ನು ಶುಶ್ರಾವ್ಯವಾಗಿ ಹಾಡುತ್ತಿದ್ದರು ಇವರ ನಿಧನ ಜಾನಪದ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಗುಣಗಾನ ಮಾಡಿದ್ದಾರೆ.