ಬಸ್ ದರ ಹೆಚ್ಚಳ ಮಾಡಿ ಮೈಸೂರು ಬೆಂಗಳೂರು ಬಸ್ ಪ್ರಯಾಣಿಕರಿಗೆ ಶಾಕ್

ಮೈಸೂರು: ಒಂದು ಕಡೆ ಬೆಂಗಳೂರು- ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್‌ ಹೈವೆ ಯೋಜನೆ ಸಾಕಾರದ ಹೆಗ್ಗಳಿಕೆ ನಮಗೆ ಸಲ್ಲಬೇಕು ಎಂದು ರಾಜ್ಯ ಸರ್ಕಾರ ತನ್ನನ್ನು ‌ ಹೊಗಳಿಕೊಳ್ಳುತ್ತಿದೆ ಇತ್ತ ಟಿಕೆಟ್ ದರ ಏರಿಕೆ ಮಾಡಿ ಪ್ರಯಾಣಿಕರನ್ನು ಶೋಷಿಸುತ್ತಿದೆ.

ಎಕ್ಸ್‌ಪ್ರೆಸ್‌ ಹೈವೆಯಿಂದ ಮೊದಲು ಟೋಲ್ ಸಂಗ್ರಹದ ಬರೆ ಎಳೆದ ಸರ್ಕಾರ ಈಗ ಬಸ್ ಪ್ರಯಾಣದ ದರ ಹೆಚ್ಚಳ ಮಾಡಿ ಮತ್ತೊಂದು ‌ಬರೆ ಎಳೆದಿದೆ.

ಬೆಂಗಳೂರು ನಿಡಘಟ್ಟ ನಡುವಿನ ಕಣಿಮಿಟಿಕೆ ಯಿಂದ ನಿನ್ನೆಯಿಂದಲೆ ಟೋಲ್ ಸಂಗ್ರಹ ಮಾಡಲಾಗುತ್ತಿದೆ.

ಕೆಎಸ್ಆರ್ ಟಿಸಿ ಟೋಲ್ ಸಂಗ್ರಹದ ಹೊರೆ ಯನ್ನು ಪ್ರಯಾಣಿಕರ ಮೇಲೆ ಹೊರೆಸಿದೆ.

ಕೆಎಸ್ಆರ್ ಟಿಸಿಯ ಸಾಮಾನ್ಯ ಬಸ್ ಗಳಲ್ಲಿ ‌ಒಬ್ಬರಿಗೆ 15 ರೂಪಾಯಿ, ರಾಜಹಂಸ ಬಸ್ ಗಳಲ್ಲಿ ‌18 ರೂಪಾಯಿ ಹಾಗೂ ಮಲ್ಟಿ ಆಕ್ಸೈಲ್ ಐರಾವತ ಸೇರಿದಂತೆ ಐಷಾರಾಮಿ ಬಸ್ ಗಳಲ್ಲಿ 20 ರೂಪಾಯಿ ದರ ಹೆಚ್ಚಳ ಮಾಡಲಾಗಿದೆ.

ಒಟ್ಟಾರೆ ಸಾಮಾನ್ಯ ಜನರಿಗೆ ಒಂದಲ್ಲ ಒಂದು ರೀತಿಯಲ್ಲಿ ದರ ಏರಿಕೆ ಬಿಸಿ ತಟ್ಟುತ್ತಲೆ ಇದದ್ದರೂ ಬಿಜೆಪಿ ಸರ್ಕಾರ ಎಲ್ಲಾ ಅಭಿವೃದ್ಧಿ ತನ್ನದೇ ಎಂದು ಕೊಚ್ಚಿಕೊಳ್ಳುತ್ತಿದೆ.