ಕೊಳ್ಳೇಗಾಲ: ಖಾಸಗಿ ಬಸ್ ನಲ್ಲಿ ಅಕ್ರಮವಾಗಿ ಮಧ್ಯ ಸಾಗಿಸುತ್ತಿದ್ದನ್ನು ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಬಸ್ ಹಾಗೂ ಮಧ್ಯವನ್ನು ವಶಪಡಿಸಿಕೊಂಡಿದ್ದಾರೆ.
ಬಸ್ ಹಾಗೂ ಮದ್ಯದ ಒಟ್ಟು ಮೌಲ್ಯ 50,22,925 ಗಳು.
ಖಚಿತ ಮಾಹಿತಿ ಮೇರೆಗೆ ಕೊಳ್ಳೇಗಾಲ ಟೌನ್ ಮಾದೇಗೌಡ ಪೆಟ್ರೋಲ್ ಬಂಕ್ ಬಳಿ ಖಾಸಗಿ ಬಸ್ಸನ್ನು ತಡೆದು ನಿಲ್ಲಿಸಿ ದಾಳಿ ಮಾಡಿ ಶೋಧನೆ ಮಾಡಲಾಯಿತು.
ಈ ವೇಳೆ ಬಸ್ ನಲ್ಲಿ 59.250 ಲೀಟರ್ ಮದ್ಯವನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದುದ್ದು ಕಂಡುಬಂದಿದೆ.
ಇದು ಅಬಕಾರಿ ಕಾಯ್ದೆ ಪ್ರಕಾರ ಶಿಕ್ಷಾರ್ಹ ಅಪರಾಧವಾದ ಕಾರಣ ಬಸ್ಸಿನ ಚಾಲಕ ಸೆಲ್ವಕುಮಾರ್ ಹಾಗೂ ಬಸ್ ಕಂಡಕ್ಟರ್ ಕೆ. ರಾಜಕುಮಾರ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ
ಮದ್ಯ ಹಾಗೂ ವಾಹನವನ್ನು ವಶ ವಶಪಡಿಸಿಕೊಂಡು ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದ್ದು,ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕೊಳ್ಳೇಗಾಲ ವಲಯ ಅಬಕಾರಿ ನಿರೀಕ್ಷಕರು ಪ್ರಕರಣವನ್ನು ದಾಖಲಿಸಿದ್ದಾರೆ.
ಮದ್ಯದ ಮೌಲ್ಯ= 22,925ರೂ. ವಾಹನ ಮೌಲ್ಯ= 50 ಲಕ್ಷ ರೂ. ಒಟ್ಟು ಮೌಲ್ಯ=5022925 ರೂ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಅಬಕಾರಿ ಜಂಟಿ ಆಯುಕ್ತರು (ಜಾರಿ ಮತ್ತು ತನಿಖೆ) ಮೈಸೂರು ವಿಭಾಗ
ಡಾ.ಬಿ. ಸಿ. ವಿಜಯ್ ಕುಮಾರ್ ಹಾಗೂ ಅಬಕಾರಿ ಉಪ ಆಯುಕ್ತರು ಚಾಮರಾಜನಗರ ಜಿಲ್ಲೆ ಆರ್.ನಾಗಶಯನ ಅವರ ನಿರ್ದೇಶನದಂತೆ ಕೊಳ್ಳೇಗಾಲ ವಲಯದ ಅಬಕಾರಿ ನಿರೀಕ್ಷಕರು ಮತ್ತು ಸಿಬ್ಬಂದಿ ಖಾಸಗಿ ಬಸ್ ಮೇಲೆ ದಾಳಿ ಮಾಡಿದರು.