(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)
ಚಾಮರಾಜನಗರ: ಚಾಮರಾಜನಗರದ ಪಟ್ಟಣ ಠಾಣೆಯ ಅಂಗಳ ವಿದ್ಯುತ್ ಬೆಳಕಿಲ್ಲದೆ ಕತ್ತಲೆಯಲ್ಲಿ ಮುಳಗಿದೆ.
ದಸರಾ ಸಂದರ್ಭದಲ್ಲಿ ಸರ್ಕಾರಿ ಕಟ್ಟಡಗಳು ವಿದ್ಯುತ್ ಅಲಂಕಾರಗೊಳಿಸಬೇಕು ಎಂಬ ಸೂಚನೆ ಅಮರಾಜನಗರ ಜಿಲ್ಲಾಡಳಿತ ಸೂಚಿಸಿತ್ತು.
ಕೆಲವು ಠಾಣೆಯವರು ಸ್ವಂತ ಖರ್ಚಿನಲ್ಲಿ ವಿದ್ಯುತ್ ದೀಪ ಹಾಕಿಸಿಕೊಂಡರೆ ಚಾಮರಾಜನಗರ ಪಟ್ಟಣ ಠಾಣೆಯವರು ಇದರತ್ತ ಗಮನ ಹರಿಸಲೇ ಇಲ್ಲ.
ಇತ್ತ ಠಾಣೆಯ ಸಮೀಪದ ಬಲ್ಬ್ ಕೂಡ ಕೆಟ್ಟು ಹೋಗಿದ್ದು ಅದನ್ನ ದುರಸ್ಥಿ ಪಡಿಸುವ ಗೋಜಿಗೂ ಹೋಗದೆ ಇರುವುದು ವಿಪರ್ಯಾಸ.
ಮತ್ತೊಂದೆಡೆ ಠಾಣೆಯ ಮುಂಬಾಗದ ಡಿವೈಡರ್ ನಲ್ಲಿರುವ ಹೈ ಮಾಸ್ಟ್ ಲೈಟ್ ಗಳು ಕೂಡಾ ಮೊದಲೆ ಕೆಟ್ಟಿವೆ.
ನಗರಸಬೆ ಆಡಳಿತದ ದುರಾವಸ್ಥೆಯಿಂದ ಠಾಣೆಗೆ ಬರುವ ದೂರುದಾರರು ಹಿಂದೆ ಮುಂದೆ ನೋಡುವಂತಾಗಿದೆ,ಅವರಿಗೂ ಕತ್ತಲೆ ಆವರಿಸಿದಂತಾಗಿದೆ.