ಬೆಳಗಾವಿ: ಕತ್ತೆ ಕಾಯ್ತಿದ್ದಿರೇನ್ರಿ ಎಂದು ನಗರಾಭಿವೃದ್ದಿ ಸಚಿವ ಬೈರತಿ ಬಸವರಾಜ್ ಪಾಲಿಕೆ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಶುಕ್ರವಾರ ಪಾಲಿಕೆ, ಸ್ಮಾರ್ಟ್ ಸಿಟಿ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರಗಳ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಬೈರತಿ ಬಸವರಾಜ್ ಮಾತನಾಡಿದರು.
ಪಾಲಿಕೆ ಅಧಿಕಾರಿಗಳು ಕಟ್ಟಡದ ಅನುಮತಿ ನೀಡಿದ್ದು, ಮೂರು ಮಹಡಿಯದ್ದು, ಆದರೆ ಆರು ಮಹಡಿ ಕಟ್ಟಿಕೊಂಡಿದ್ದಾರೆ. ಮಾಹಿತಿ ನನ್ನ ಕಡೆ ಇದೆ. ತರಸಿಕೊಡುತ್ತೇನೆ ಎಂದು ಉಡಾಫೆ ಉತ್ತರ ಹೇಳುತ್ತಿರಾ. ಏನು ಕತ್ತೆ ಕಾಯುತ್ತಿದ್ದಿರಾ ಎಂದು ಸಚಿವ ಬೈರತಿ ಬಸವರಾಜ್ ಕೇಳಿದರು.
ಭಾಗ್ಯನಗರದಲ್ಲಿ ಮೂರು ಮಹಡಿಯ ಕಟ್ಟಡ ಅನುಮತಿ ಪಡೆದಿದ್ದಾರೆ. ಕಟ್ಟಿದ್ದು ಮಾತ್ರ ಆರು ಮಹಡಿ. ಪಾಲಿಕೆಯ ಸಂಬಂದ ಪಟ್ಟ ಅಧಿಕಾರಿ ಕತ್ತೆ ಕಾಯ್ತಿದ್ದಿರೇನ್ರಿ ಎಂದು ಹರಿಹಾಯ್ದರು.
ಪಾಲಿಕೆಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿರುವ ಬಹುಮಡಿ ಕಟ್ಟಡ ಎಷ್ಟು ಇವೆ ಎಂಬುದನ್ನು ಗುರುತಿಸಿ ಅವರಿಗೆ ನೋಟಿಸ್ ನೀಡಿ ತೆರವು ಮಾಡಿ ಇಲ್ಲದಿದ್ದರೇ ನಿಮ್ಮ ಮೇಲೆ ಕ್ರಮ ಜರುಗಿಸುತ್ತೇನೆ ಎಂದು ಸಚಿವರು ಎಚ್ಚರಿಕೆ ನೀಡಿದರು.
ಶಾಸಕರಾದ ಅನಿಲ ಬೆನಕೆ, ಅಭಯ ಪಾಟೀಲ, ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ, ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ, ಪಾಲಿಕೆ ಆಯುಕ್ತ ಜಗದೀಶ್ ಕೆ.ಎಚ್., ಸ್ಮಾರ್ಟ್ ಸಿಟಿ ಎಂಡಿ ಶಶಿಧರ ಕುರೇರ್, ಬುಡಾ ಆಯುಕ್ತ ಪ್ರೀತಂ ನಸಲಾಪೂರೆ ಸೇರಿದಂತೆ ಇನ್ನಿತರರು ಸಭೆಯಲ್ಲಿ ಉಪಸ್ಥಿತರಿದ್ದರು.