ಕಾಟಾಚಾರದ ರಸ್ತೆ ಸಪ್ತಾಹ: ದಿನೇ ದಿನೇ ಹೆಚ್ಚುತ್ತಿರೋ ಅಪಘಾತಗಳು

ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಪಟ್ಟಣದಲ್ಲಿ 2021ರ ಜನವರಿ ತಿಂಗಳಲ್ಲಿ ರಸ್ತೆ ಸುರಕ್ಷಾ ಸಪ್ತಾಹ ನಡೆಯಿತು.
ಆದರೆ ಅದೇ ತಿಂಗಳಲ್ಲಿ ಅತಿ ಹೆಚ್ಚಿನ ಅಪಘಾತಗಳು ನಡೆದು ಸಾವು ನೋವುಗಳು ಸಂಭವಿಸಿದೆ.
ಚಾಮರಾಜನಗರ ಜಿಲ್ಲಾ ಪೆÇಲೀಸ್ ಇಲಾಖೆ ಪ್ರತಿ ವರ್ಷದಂತೆ ಕಾರ್ಯಕ್ರಮ ಮಾಡಬೇಕು ಎಂಬಂತೆ ಸಂಚಾರ ಠಾಣೆಗೆ ಕಾರ್ಯಕ್ರಮದ ರೂವಾರಿ ಮಾಡಿ ಅವರು ಆಯೋಜಿಸಲ್ಪಟ್ಟ ಕಾರ್ಯಗಳಿಗೆ ಹೋಗಿ ಉದ್ಘಾಟಿಸಿ ಬರೋದಷ್ಟೆ ಹಿರಿಯ ಅಧಿಕಾರಿಗಳದ್ದು ಆದರೆ ಅವರು ಎಲ್ಲಿಯೂ ಖುದ್ದು ನಿಂತು ಸಂಚಾರಿ ನಯಮದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸೊ ಕೆಲಸ ಇರಲಿ ದಂಡವನ್ನೂ ಕೂಡ ಹಾಕೋದಿಲ್ಲ.
ಚಾಮರಾಜನಗರ ಸಂಚಾರ ಠಾಣೆಯ ಕೆಲವರು ಕೆಲವು ಕಾಲೇಜುಗಳಲ್ಲಿ ನೀತಿ ಪಾಠ ಮಾಡುವಂತೆ ಕಾರ್ಯಕ್ರಮ ಉದ್ಘಾಟನೆ, ಒಂದಷ್ಟು ಉಪದೇಶ ಮಾಡಿ ಸರ್ಕಾರಕ್ಕೊಂದಷ್ಟು ಬಿಲ್ ಮಾಡಿ ನಮ್ಮ ಕೆಲಸ ಮುಗೀತು ಅಂತ ಕೈತೊಳೆದುಕೊಂಡು ಸುಮ್ಮನಾಗುತ್ತಾರೆ.
ಮತ್ತೊಂದೆಡೆ ಠಾಣೆಗೆ ಬಂದ ಅದೆಷ್ಟೋ ವಾಹನಗಳಿಗೆ ದಂಡ ವಿಧಿಸದೇ ಪ್ರಭಾವಿಗಳ ಪ್ರಭಾವಕ್ಕೆ ಒಳಗಾಗಿ ಬಿಟ್ಟು ಕಳುಹಿಸುತ್ತಾರೆ.
ಇದರಿಂದ ಮತ್ತಷ್ಟು ಅವಘಡಗಳು ಸಂಭವಿಸುತ್ತಿದೆ.
ಪಟ್ಟಣದೊಳಗೆ ಅದೆಷ್ಟೋ ವಾಹನಗಳಿಗೆ ಎಫ್ ಸಿ, ವಿಮಾ ಇಲ್ಲದ ಕಾರಣ ವಾಹನಗಳ ಜಪ್ತಿ ಮಾಡಿ ದಂಡ ಹಾಕಬೇಕಾದ ಇವರು ಯಾವ್ದೊ ಒಂದು ಕಾರಣಕ್ಕೆ ದಂಡ ಹಾಕಿ ಉಳಿದ್ದನ್ನ ಜೇಬಿಗಿಸಿಕೊಂಡು ಕಂಡವರ ಪ್ರಾಣದ ಜೊತೆ ಪರೋಕ್ಷವಾಗಿ ಚೆಲ್ಲಾಟವಾಡುತ್ತಿರುತ್ತಾರೆ.
ಪಟ್ಟಣದಲ್ಲಿ ಯತೇಚ್ಚವಾಗಿ ಅಪ್ರಾಪ್ತ ಮಕ್ಕಳಿಂದ ವಾಹನ ಚಾಲನೆ, ನಂಬರ್ ಪ್ಲೇಟ್ ಇಲ್ಲದ ವಾಹನ ಚಲಾವಣೆ, ವಿಮೆ, ಎಫ್ ಸಿ ಇಲ್ಲದ ವಾಹನಗಳು ಜೋಡಿ ರಸ್ತೆಯಲ್ಲೆ ಓಡಾಡುತ್ತಿದೆ.
ಆದರೆ ಇದನ್ನ ಕಟ್ಟು ನಿಟ್ಟಾಗಿ ಕ್ರಮ ವಹಿಸೋದು ಬಿಟ್ಟು ಊರ ಹೊರಗೆ ನಿಂತು ತಪಾಸಣೆ ನೆಪದಲ್ಲಿ ವಸೂಲಿ ಕೇಂದ್ರ ಮಾಡಿಕೊಂಡಿದ್ದಾರೆ ಎಂಬುದು ಕೆಲವರ ಆರೋಪ.
ಪಟ್ಟಣದಲ್ಲಿ ದಂಡ ಹಾಕಿದರೆ ಹದ್ದಿನ ಕಣ್ಣಿನ ತರಹ ಸಾರ್ವಜನಿಕರ ಮೊಬೈಲ್ ಗೆ ಸಿಲುಕಿ ಬಿಡುತ್ತೇವೆ ಎಂದು ಊರ ಹೊರಗೆ ನಿಂತು ಬಿಡುತ್ತಾರೆ.
ಅದರಂತೆ ಕಳೆದ ಸಾಲಿನಲ್ಲಿ ಸಂಚಾರಿ ಠಾಣೆಯ ನಾಲ್ವರ ಅಮಾನತು ಆಗಿತ್ತು.
ಅದಕ್ಕೆ ಕಾರಣ ಇವರ ಲಂಚದವತಾರದ ವಿಡಿಯೋ ವೈರಲ್ ಆಗಿದ್ದು.
ಇದೇ ಭಯ ಕೆಲವರಲ್ಲಿ ಇದ್ದರೂ ಲಂಚದ ಹಾವಳಿಯೇನೊ ನಿಂತಿಲ್ಲ.
ಬಾಡಿಕ್ಯಾಮ್ ಧರಿಸಿ ಕೆಲಸ ಮಾಡಬೇಕೆಂಬ ಎಸ್ಪಿ ಆದೇಶ ಕೇವಲ ಒಂದು ದಿನಕ್ಕಷ್ಟೆ ಸೀಮಿತವಾಗುತ್ತದೆ. ನಂತರ ಯಥಾಸ್ಥಿತಿ.
ಕೆಲವೊಮ್ಮೆ ಪೆÇಲೀಸ್ ಇಲಾಖೆಯ ಅದೆಷ್ಟೋ ಜನ ಶಿರಸ್ತ್ರಾಣ ಧರಿಸದೇ ಹೋಗುವುದು ಕಂಡುಬಂದರೂ ಇಲಾಖೆ ಮಾತ್ರ ಮೌನ ವಹಿಸುತ್ತದೆ.
ಹಿಂದಿನ ಎಸ್ಪಿ ಕುಲದೀಪ್ ಕುಮಾರ್ ಜೈನ್ ಅವರಿದ್ದಾಗ ಇಲಾಖೆ ಸಿಬ್ಬಂದಿ ಶಿರಸ್ತ್ರಾಣ ಧರಿಸದೆ ಹೋದರೆ ಸಿಬ್ಬಂದಿಗೆ ಮತ್ತು ಯುನಿಟ್ ಆಪೀಸರ್ ಗೆ ನೋಟೀಸ್ ನೀಡುವ ಕಟ್ಟುನಿಟ್ಟಿನ ಕ್ರಮ ಜರುಗಿಸಿದ್ದರು.
ತದ ನಂತರದಲ್ಲಿ ಯಧ್ವಾ ತದ್ವಾ ವಾಹನಗಳು ನಿಯಮ ಉಲ್ಲಂಘನೆ ಹೆಚ್ಚಾದವು.
ಒಟ್ಟಾರೆ ನಿಯಮ ಪಾಲನೆಗಿಂತ ಉಲ್ಲಂಘನೆ ಹೆಚ್ಚಾಗಿದ್ದು 2021ರ ಆರಂಭದಿಂದ ಇಂದಿನ ದಿನದವರೆಗೆ ದಿನಕ್ಕೆರಡು ಅಪಘಾತ ನಡೆಯುತ್ತಲೇ ಇದೆ. ಸಾವುಗಳೂ ಕೂಡ ಅದೆ ಪ್ರಮಾಣದಲ್ಲಿ ಇದೆ ಎಂದರೆ ತಪ್ಪಾಗಲಾರದು.
ಜೋಡಿರಸ್ತೆ ಡಿವೈಸ್ಪಿ ಅವರ ಕಚೇರಿ ಮುಂಭಾಗವೇ ತ್ರಿಬಲ್ ರೈಡಿಂಗ್, ಏಕಮುಖ ಸಂಚಾರ, ಮೊಬೈಲ್ ಬಳಕೆ, ಅಪ್ರಾಪ್ತ ಮಕ್ಕಳಿಂದ ವಾಹನ ಚಾಲನೆ ಹೆಚ್ಚಾಗಿದೆ.
ಪೊಲೀಸ್ ಇಲಾಖೆ ನಡೆಸಿದ ರಸ್ತೆ ಸುರಕ್ಷಾ ಸಪ್ತಾಹ ಕಾರ್ಯಕ್ರಮ ಹೊಳೆಯಲ್ಲಿ ಹುಣಸೆ ಹಣ್ಣು ತೇಯ್ದಂತಾಗಿದೆ.