ಶ್ರೀರಂಗಪಟ್ಟಣ: ಜೆಎಸ್ಎಸ್ ಕಾಲೇಜಿನ ವಿದ್ಯಾರ್ಥಿಗಳು ಶ್ರೀರಂಗಪಟ್ಟಣದ ಕಾವೇರಿ ಸ್ನಾನಘಟ್ಟದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡು ಮಾದರಿಯಾದರು.
ನೇಚರ್ ಫಾರ್ ಲೈಫ್ ಹೈಯರ್ ರಿಸರ್ಚ್ ಆಫ್ ಎಜುಕೇಶನ್ ಮೈಸೂರು ಮತ್ತು ಕೇಂದ್ರ ಸರ್ಕಾರ, ಕರ್ನಾಟಕ ಸರ್ಕಾರ ಸಹಯೋಗ ನೀಡಿದವು.
ನಂತರ ಅಲ್ಲಿ ಸೇರಿದ್ದ ಪ್ರವಾಸಿಗರಿಗೆ ನದಿಯನ್ನು ಯಾವ ರೀತಿ ಸಂರಕ್ಷಣೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಅರಿವು ಮೂಡಿಸಿದರು.
ಪ್ಲಾಸ್ಟಿಕ್ ಬಳಸಬೇಡಿ, ಬಟ್ಟೆ ಬ್ಯಾಗ್ ಉಪಯೋಗಿಸಬೇಕು, ನದಿಗಳನ್ನು ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮದಾಗಬೇಕು ಎಂದು ಹೇಳಿದರು.
ನದಿಗೆ ತ್ಯಾಜ್ಯ ವಸ್ತುಗಳನ್ನು ಹಾಕುವುದರಿಂದ ಕ್ಯಾನ್ಸರ್ ಮತ್ತು ಮಾರಕ ಕಾಯಿಲೆಗಳು ಬರುತ್ತದೆ ಆದ ಕಾರಣ ನಾವು ನದಿಯನ್ನು ಸಂರಕ್ಷಣೆ ಮಾಡಿಕೊಂಡು ಹೋಗಬೇಕೆಂದು ಸಾರ್ವಜನಿಕರಿಗೆ ಜೆ ಎಸ್ ಎಸ್ ವಿದ್ಯಾರ್ಥಿಗಳು ತಿಳಿಹೇಳಿದರು.