(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)
ಚಾಮರಾಜನಗರ:ಕಾನೂನು ಸುವ್ಯವಸ್ಥೆ ಕಾಪಾಡುವ ಜಿಲ್ಲೆಯ ಬಹುತೇಕ ಆರಕ್ಷಕರಿಗೆ ವಸತಿ ಸಮಸ್ಯೆ ಇದ್ದರೂ ಚಾಮರಾಜನಗರ ಜಿಲ್ಲಾ ಪೊಲೀಸ್ ಇಲಾಖೆ ಮೌನವಾಗಿದೆ.
ಜಿಲ್ಲೆಯ ಗುಂಡ್ಲುಪೇಟೆ, ಚಾ.ನಗರ ಸಂತೆಮರಳ್ಳಿ ಕುದೇರು ಹಾಗೂ ಬೇಗೂರು ಹೀಗೆ ಹಲವೆಡೆ ಕೆಲ ಫೋಲೀಸರಿಗೆ ವಸತಿ ಸಮಸ್ಯೆ ಎದುರಾಗಿದೆ.
ವಸತಿ ಸಮಸ್ಯೆ ಇಂದಿನದ್ದೆನಲ್ಲ ಮೊದಲಿನಿಂದಲೂ ಇದೆ,ಈಗಲೂ ಇದೆ.
ಹಲವೆಡೆ ವರ್ಗಾವಣೆಯಾದರೂ ಕೆಲವು ಸಿಬ್ಬಂದಿ ಮನೆ ಖಾಲಿ ಮಾಡದೆ ಇರೋದು ಕೂಡಾ ಸಮಸ್ಯೆಗೆ ಕಾರಣವಾಗಿದೆ.
ವರ್ಗಾವಣೆಯಾದ ಜಾಗಕ್ಕೆ ಬಂದವರು ವಸತಿ ಇಲ್ಲದೆ ಬಾಡಿಗೆ ಮನೆ ಮೊರೆ ಹೋಗಬೇಕಾದ ದೌರ್ಭಾಗ್ಯ ಎದುರಾಗಿದೆ.
ಚಾ.ನಗರದಿಂದ ಸಂತೆಮರಳ್ಳಿಗೊ, ಗುಂಡ್ಲುಪೇಟೆಗೊ, ಬೇಗೂರಿಗೊ ವರ್ಗಾವಣೆಯಾದರೆ ಮೂಲ ವಸತಿ ನಿಲಯ ಬಿಡಲಾಗುತ್ತಿಲ್ಲ.
ಅಲ್ಲಿಂದ ಬಂದವರಿಗೂ ಸ್ಥಳದ ಅಭಾವ ಎದುರಾಗಿದೆ.
ಕುದೇರು ಠಾಣೆಯ ವಸತಿ ನಿಲಯಗಳಲ್ಲಿ ಮೂಲಭೂತ ಸೌಲಭ್ಯ ಇಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.
ಸಮೀಪದ ಸಂತೇಮರಳ್ಳಿ ಠಾಣೆಯಲ್ಲಿ ೩೦ ಸಿಬ್ಬಂದಿ ಇದ್ದು ೧೨ ವಸತಿಗಳಿವೆ, ಅದರಲ್ಲಿ ಇಬ್ಬರು ಪಿಎಸ್ ಐ ಗಳಿದ್ದಾರೆ.
ಉಳಿದ ೧೮ ಜನರಿಗೆ ವಸತಿ ಸಮಸ್ಯೆ ಇದೆ.ಹಾಗಾಗಿ ಮೂಲ ಸ್ಥಾನದಿಂದ ಕರ್ತವ್ಯನಿರತ ಸ್ಥಳಕ್ಕೆ ಪ್ರಯಾಣ ಮಾಡುವ ಸಮಯ ವ್ಯರ್ಥವಾಗುವ ಜೊತೆಗೆ ಆಯಾಸ ಪಡೆಯಬೇಕಾದ ಸ್ಥಿತಿ ಕೂಡ ನಿರ್ಮಾಣವಾಗಿದೆ.
ಇನ್ನ ಕೆಲವು ವಸತಿ ನಿಲಯಗಳಲ್ಲಿ ಸಾವಿಗೆ ಶರಣಾದ ಮನೆಗಳು ಕೂಡ ಇದ್ದು ಇಲ್ಲಿಗೆ ಬೇರೆಯವರು ಬರಲು ಹಿಂದೇಟು ಹಾಕುತ್ತಿದ್ದಾರೆ.
ವಸತಿ ನಿಲಯದ ಸಮಸ್ಯೆ ಒಂದು ಕಡೆಯಾದರೆ ಈಗ ೧೫ ಕ್ಕೂ ಹೆಚ್ಚು ಜನರಿಗೆ ವೇತನ ವಿಳಂಭವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ವಿವಿದ ಠಾಣೆಗಳಲ್ಲಿ ಕೆಲಸ ನಿರ್ವಹಣೆ ಮಾಡುವ ೧೫ ಕ್ಕು ಹೆಚ್ಚು ಜನರಿಗೆ ವೇತನ ಬಿಡುಗಡೆಯಾಗದೆ ಅಸಮದಾನ ಪಡುವಂತಾಗಿದೆ
ಜೊತೆಗೆ ಯಾವ ಕಾರಣಾಕ್ಕಾಗಿ ತಡೆ ಹಿಡಿಯಲಾಗಿದೆ ಎಂಬುದು ಕೂಡ ತಿಳಿಯದಂತಾಗಿದೆ.
ಅನುಕಂಪ ಆಧಾರಿತ ಹುದ್ದೆಯಿಂದ ಬಂದ ಬಹುತೇಕರು ಜಿಲ್ಲಾ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದು ಇವರಿಗೆ ಸೂಕ್ತ ತರಬೇತಿ ಇಲ್ಲದೆ ಆಯಾ ವಿಭಾಗದ ಕೆಲ ಕೆಲಸ ತಿಳಿಯದೆ ಇರೋದರಿಂದ ತಾಂತ್ರಿಕ ಸಮಸ್ಯೆ ಕೂಡ ಎದುರಿಸುವಂತಾಗಿದೆ.
ಒಟ್ಟಾರೆ ಜಿಲ್ಲೆಯ ಬಹುತೇಕ ಆರಕ್ಷಕರಿಗೆ ವಸತಿ ಸಮಸ್ಯೆ ಇದ್ದರೆ, ಕೆಲವರಿಗೆ ವೇತನ ಪಾವತಿ ಸಮಸ್ಯೆ ಕೂಡ ಎದುರಾಗಿದೆ.
ಚಾಮರಾಜನಗರ ಪೊಲೀಸ್ ವರೀಷ್ಟಾದಿಕಾರಿಗಳು ಇತ್ತ ಗಮನ ಹರಿಸಿ ಶೀಘ್ರ ಸಮಸ್ಯೆ ಬಗೆಹರಿಸಬೇಕಿದೆ.