ಶ್ರೀರಂಗಪಟ್ಟಣ: ಕರ್ನಾಟಕ ಬಂದ್ ಅಂಗವಾಗಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆ ಆರ್ ಎಸ್ ಅಣೆಕಟ್ಟು ಮುಂದೆ ವಿವಿಧ ಸಂಘಟನೆಗಳವರು ಧರಣಿ ನಡೆಸಿದರು.
ನಂತರ ಶ್ರೀರಂಗಪಟ್ಟಣದ ಕುವೆಂಪು ವೃತ್ತದಿಂದ ಮಿನಿ ವಿಧಾನಸೌಧದ ವರೆಗೆ ವಿವಿಧ ಸಂಘಟನೆಗಳು, ಧರ್ಮ ಬಾಂಧವರು ಹಾಗೂ ಚಂದ್ರಮನ ಆಶ್ರಮದ ಮಹಾಸ್ವಾಮಿಗಳು ಮೆರವಣಿಗೆ ಮಾಡಿ ತಾಲೂಕು ಕಚೇರಿ ಮುಂದೆ ಧರಣಿ ಕುಳಿತರು.
ನಮ್ಮ ರಾಜ್ಯಕ್ಕೆ ಕುಡಿಯಲು ನೀರಿಲ್ಲ, ಬರ ಪರಿಸ್ಥಿತಿ ಇರುವಾಗ ತಮಿಳುನಾಡಿಗೆ ನೀರು ಹರಿಸಬೇಕೆಂದು ತೀರ್ಪು ಕೊಟ್ಟಿರುವ ನ್ಯಾಯಾಲಯ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ರೈತ ನಾಯಕ ನಂಜುಂಡೇಗೌಡರು ಈ ವೇಳೆ ಕೆ ಆರ್ ಎಸ್ ಅಣೆಕಟ್ಟು ನಿರ್ಮಿಸಲು ಕಾರಣರಾದ ಕೃಷ್ಣರಾಜ ಒಡೆಯರನ್ನ ಸ್ಮರಿಸಿದರು.
ಇವತ್ತು ಎಲ್ಲಾ ರಾಜ್ಯಗಳಿಗೂ ನೀರು ಹರಿಸುತ್ತಿರುವ ಅಣೆಕಟ್ಟು ಯಾವುದಾದರೂ ಇದೆ ಎಂದರೆ ಅದು ನಮ್ಮ ಕೆಆರ್‌ಎಸ್ ಅಣೆಕಟ್ಟು ಮಾತ್ರ ಎಂದು ಹೇಳಿದರು.