ಕೊಲೆ ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ

ಮೈಸೂರು: ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಒಪ್ಪದ ಯುವಕನನ್ನು ಉಸಿರುಗಟ್ಟಿಸಿ ಕೊಲೆಗೈದಿದ್ದ ತೀ.ನರಸೀಪುರ ವ್ಯಕ್ತಿಗೆ  ಏಳನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ತಿ.ನರಸೀಪುರ ತಾಲೂಕಿನ ಆರ್.ನಂದೀಶ್(33)ಎಂಬಾತ ಶಿಕ್ಷೆಗೊಳಗಾದ ವ್ಯಕ್ತಿ.

ಈತ ಸ್ನೇಹಿತ ಎಂ.ಕೆ.ರಾಜೇಂದ್ರನ ಮೊಬೈಲ್ ಗೆ ಕರೆ ಮಾಡಿ 2017ರ ಏಪ್ರಿಲ್ 19ರಂದು ರಾತ್ರಿ 10.15ರಲ್ಲಿ ಜಮೀನಿನ ಬಳಿ ಕರೆಸಿಕೊಂಡಿದ್ದ.

ತನ್ನ ಪತ್ನಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ನಡೆದಿದ್ದು 6 ತಿಂಗಳು ಲೈಂಗಿಕ ಸಂಪರ್ಕ ಮಾಡಬಾರದು ಎಂದು ವೈದ್ಯರು ಹೇಳಿದ್ದಾರೆ. ಹಾಗಾಗಿ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ರಾಜೇಂದ್ರನಿಗೆ‌ ನಮವಿ ಮಾಡಿದ್ದ.

ಆದರೆ ಇದಕ್ಕೆ ರಾಜೇಂದ್ರ ಒಪ್ಪಿರಲಿಲ್ಲ.ಇದರಿಂದ ಸಿಟ್ಟಿಗೆದ್ದ ನಂದೀಶ ರಾಜೇಂದ್ರನ ಕುತ್ತಿಗೆಯನ್ನು ಟವಲ್ ನಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿ ಬಳಿಕ ಮೊಬೈಲ್  ಸುಟ್ಟು ಹಾಕಿದ್ದ.

ಈ ಕುರಿತು ಪೊಲೀಸರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಯಶವಂತ್ ಕುಮಾರ್ ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನಂದೀಶನಿಗೆ ಶಿಕ್ಷೆ ವಿಧಿಸಿದ್ದಾರೆ.

ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ನಾಗರಾಜ ವಾದ ಮಂಡಿಸಿದ್ದರು.