ಕಲಬುರಗಿ: ಕಳೆದ ಆಗಸ್ಟ್ 22 ರಂದು ಮಾನ್ವಿ ತಾಲ್ಲೂಕಿನ ಕುರ್ಡಿ ಗ್ರಾಮದಲ್ಲಿ ನಡೆದಿದ್ದ ಸಂಜಯ್ ಕುರ್ಡೀಕರ್ ಕೊಲೆ ಪ್ರಕರಣದ ತನಿಖೆಯನ್ನು ಪರಿಶೀಲಿಸುವಂತೆ ರಾಯಚೂರು ಎಸ್‌ಪಿ ಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.
ಕಲಬುರಗಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸುತ್ತಿದ್ದ ವೇಳೆ ಕೊಲೆಯಾದ ಸಂಜಯ್ ಅವರ ಪತ್ನಿ ಶಾಂತಮ್ಮ ನ್ಯಾಯ ಕೊಡಿಸುವಂತೆ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿಕೊಂಡರು.
ಶಾಂತಮ್ಮ ಅವರ ನೋವಿಗೆ ಮರುಗಿದ ಸಿಎಂ,ತಕ್ಷಣ ದೂರವಾಣಿ ಕರೆ ಮಾಡಿ ರಾಯಚೂರು ಎಸ್ ಪಿ ಅವರನ್ನು ಸಂಪರ್ಕಿಸಿ ಕೊಲೆ ಪ್ರಕರಣದ ವಿವರಣೆ ನೀಡುವಂತೆ ಸೂಚಿಸಿದರು,ಜತೆಗೆ ಖುದ್ದಾಗಿ ಪರಿಶೀಲಿಸುವಂತೆ ಸೂಚಿಸಿದರು.
ನಂತರ ಈ ಬಗ್ಗೆ ತಮಗೆ ವರದಿ ನೀಡಬೇಕು, ಪ್ರಕರಣದ ತನಿಖೆ ಏನಾಯಿತು ಎಂಬ ಬಗ್ಗೆ ವರದಿ ಮಾಡಬೇಕು ಎಂದು ಸೂಚಿಸಿದರು.