ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ನಗರದ ಹೆಸರಾಂತ ವಿದ್ಯಾಸಂಸ್ಥೆಯೊಂದು ಪೂರ್ಣ ಹಣ ಪಾವತಿಸದ ಕಾರಣ ಹೊರಗಿಟ್ಟ ಸುದ್ದಿ ಜಿ ನ್ಯೂಸ್ 5ನಲ್ಲಿ ಪ್ರಕಟಿಸಿದ್ದೆವು.
ಇದೀಗ ಅವರನ್ನ ವಾಟ್ಸಾಪ್ ಗುಂಪಿನಿಂದ ತೆರೆದಿದ್ದವರು ಈಗ ಮತ್ತೆ ಗುಂಪಿ ಸೇರಿಸಿದ್ದಾರೆ ಎಂದು ಪೆÇೀಷಕರು ತಿಳಿಸಿದ್ದಾರೆ. ಇತ್ತೀಚೆಗೆ ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲೆ ಪೂರ್ಣ ಶುಲ್ಕ ಪಾವತಿಸಿಲ್ಲವೆಂದು ಆನ್ ಲೈನ್ ಕ್ಲಾಸ್ ನಿಂದ ಹೊರಗಿಟ್ಟ ಶಾಲೆ ಎಂಬ ಶೀರ್ಷಿಕೆಯೊಂದಿಗೆ ಸುದ್ದಿ ಪ್ರಕಟಿಸಿದ್ದೆವು.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೋಕಿನ ಕುರುಬರ ಹುಂಡಿ ಗ್ರಾಮದ ಮಹೇಶ್ ಎಂಬುವವರ ಪುತ್ರ ಚಾಮರಾಜನಗರ ಜೆಎಸ್ಎಸ್ ಪಬ್ಲಿಕ್ ಶಾಲೆಯಲ್ಲಿ 8ನೇ ತರಗತಿಯಲ್ಲಿ ಯಶಸ್ ಎಂಬ ವಿದ್ಯಾರ್ಥಿ ವ್ಯಾಸಂಗ ಮಾಡುತ್ತಿದ್ದು ಪ್ರಾಂಶುಪಾಲರು ವಿದ್ಯಾರ್ಥಿಗೂ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಉಪನಿರ್ದೇಶಕರ ಕಛೇರಿ ಹಾಗೂ ಜಿಲ್ಲಾಧಿಕಾರಿ ಕಚೇರಿಗೂ ದೂರು ಸಲ್ಲಿಸಿದ್ದಾರೆ. ಜೊತೆಗೆ ಉಸ್ತುವಾರಿ ಸಚಿವ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೂ ದೂರು ಸಲ್ಲಿಸಿದ್ದರು.
ದೂರಿಗೆ ಸ್ಪಂದಿಸಿದ ಸಚಿವರು ಉಪನಿರ್ದೇಶಕ ಜವರೇಗೌಡ ಅವರಿಗೆ ಸೂಕ್ತ ಸಲಹೆ ನೀಡಿದ್ದರು.
ತದ ನಂತರದ ದಿನಗಳಲ್ಲಿ ಬಹಶಃ ಉಪನಿರ್ದೇಶಕರ ಎಚ್ಚರಿಕೆ ಗಂಟೆಯಿಂದಲೊ ಈಗ ಶಾಲೆಯವರು ಸ್ಪಂದಿಸಿ ಆನ್ ಲೈನ್ ಕ್ಲಾಸ್ ವಾಟ್ಸಾಪ್ ಗುಂಪಿಗೆ ಯಶಸ್ ನನ್ನು ಮತ್ತೆ ಸೇರಿಸಿದ್ದಾರೆ ಎಂದು ಪೆÇೀಷಕ ಮಹೇಶ್ ಅವರು ಜಿ ನ್ಯೂಸ್ 5 ಗೆ ತಿಳಿಸಿದ್ದಾರೆ.