ಹಾಸನ: ಕುಡಿದ ಮತ್ತಿನಲ್ಲಿ ಪಾಪಿ ಮಗ ತಾಯಿಯನ್ನು ಕೊಂದು ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಹಾಸನದ ಸಂಕಲಾಪುರ ಗ್ರಾಮದಲ್ಲಿ ನಡೆದಿದೆ.
ಹಾಸನ ಜಿಲ್ಲೆಯ ಸಂಕಲಾಪುರ ಗ್ರಾಮದ ಸಣ್ಣಮ್ಮ( 68) ಕೊಲೆಯಾದ ತಾಯಿ. ಪತ್ನಿ ರೂಪ ಗಂಭೀರವಾಗಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಪಾನಮತ್ತನಾಗಿ ಬಂದ ನಂಜೇಶ್ ಗೌಡ ಹೆತ್ತು ಹೊತ್ತು ಬೆಳೆಸಿದ ತಾಯಿಯನ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ತಾಯಿಯನ್ನು ಕೊಂದ ಬಳಿಕ ನಂಜೇಶ್ ಗೌಡ ಪತ್ನಿ ನಡೆಸುವ ಕ್ಯಾಂಟೀನ್ ಬಳಿ ಬಂದು ಆಕೆಯ ಮೇಲೂ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.
ಸಣ್ಣಮ್ಮ ಹಾಸನ ತಾಲ್ಲೂಕಿನ ಗೋಳೇನ ಹಳ್ಳಿಯವರು. ನಂತರ ಈಕೆಯ ಕುಟುಂಬ ಸಂಕಲಾಪುರದಲ್ಲಿ ನೆಲೆಸಿತ್ತು.
ರೂಪಾ ಅವರನ್ನು ಹಾಸನದ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.