ಕುಂದಾಪುರ ಸರ್ಕಾರಿ ಕಾಲೇಜು ಬಳಿ ಮಾರಕ ಶಸ್ತ್ರ ಹಿಡಿದಿದ್ದ ಇಬ್ಬರ ಬಂಧನ

ಉಡುಪಿ:ಉಡುಪಿ ಜಿಲ್ಲೆ ಕುಂದಾಪುರದ ಸರಕಾರಿ ಪಿಯು ಕಾಲೇಜು ಬಳಿ ಮಾರಕಾಸ್ತ್ರಗಳನ್ನು ಹೊಂದಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಕುಂದಾಪುರ ಸಮೀಪದ ಗಂಗೊಳ್ಳಿ ಗ್ರಾಮ ಅಬ್ದುಲ್ ಮಜೀದ್ (32) ಮತ್ತು ರಜಬ್ (41) ಬಂಧಿತ ಆರೋಪಿಗಳು.

ಹಿಜಾಬ್ ನಿಷೇಧಿಸುವ ಅಧಿಕಾರಿಗಳ ನಿರ್ಧಾರದ ವಿರುದ್ಧ  ಕಳೆದ ಮೂರುದಿನಗಳ ಹಿಂದೆ ನಡೆದ  ಪ್ರತಿಭಟನೆಯಲ್ಲಿ ಈ ಆರೋಪಿಗಳು ಭಾಗಿಯಾಗಿದ್ದರು ಎಂದು ಹೇಳಲಾಗಿದೆ.

ಐದು ಮಂದಿ ಮಾರಕಾಸ್ತ್ರಗಳನ್ನು ಕೊಂಡೊಯ್ಯುತ್ತಿದ್ದರು. ಅವರಲ್ಲಿ ಮೂವರು  ಪರಾರಿಯಾಗಿದ್ದಾರೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.

ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.