ಮೈಸೂರು:
ಕುಡಿದ ಅಮಲಿನಲ್ಲಿ ಪತ್ನಿಯನ್ನು ಕೊಚ್ಚಿ ಕೊಲೆಗೈದ ವ್ಯಕ್ತಿಯೊಬ್ಬ ಸಿಕ್ಕಸಿಕ್ಕವರ ಮೇಲೂ ದಾಳಿ ಮಾಡಿದ್ದು,
ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ನವಿಲೂರಿನ ಜನ ಬೆಚ್ಚಿಬಿದ್ದಿದ್ದಾರೆ.
ಕುಡಿದ ಅಮಲಿನಲ್ಲಿ ಪತ್ನಿಯನ್ನು ಕೊಚ್ಚಿ ಕೊಲೆಗೈದ ಪಾತಕ ಬಿಡಿಸಲು ಬಂದ ನಾಲ್ಕು ಮಂದಿ ಮೇಲೆ ಲಾಂಗ್ ಬೀಸಿದ್ದಾನೆ.
ನವಿಲೂರಿನ ಈರಯ್ಯ ಅಲಿಯಾಸ್ ಕುಂಡ ಎಂಬಾತ ಈ ಕೃತ್ಯ ಎಸಗಿದ್ದಾನೆ.
ಜೈಲಿನಿಂದ ಇತ್ತೀಚೆಗೆ ಹೊರ ಬಂದಿದ್ದ ಈತನ ಅಟ್ಡಹಾಸಕ್ಕೆ ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ.
ಕುಡಿದ ಅಮಲಿನಲ್ಲಿ ಈರಯ್ಯ ತನ್ನ ಎರಡನೆ ಪತ್ನಿ ಮೇಲೆ ದಾಳಿ ಮಾಡಿದ್ದಾನೆ.
ಚೀರಾಟ ಕೇಳಿ ಸ್ಥಳಕ್ಕೆ ಧಾವಿಸಿದ ನಾಲ್ವರ ಮೇಲೂ ಲಾಂಗ್ ನಿಂದ ಹಲ್ಲೆ ಮಾಡಿದ್ದಾನೆ.
ಗಾಯಾಳುಗಳನ್ನ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ 10 ವರ್ಷಗಳ ಹಿಂದೆ ಈರಯ್ಯ ಮೊದಲ ಪತ್ನಿಯನ್ನು ಕೊಲೆಗೈದು ಶಿಕ್ಷೆ ಅನುಭವಿಸಿ ಜೈಲಿನಿಂದ ಹೊರಬಂದಿದ್ದ.
ಮಧ್ಯರಾತ್ರಿ ಕುಡಿದ ಅಮಲಿನಲ್ಲಿ ಎರಡನೆಯ ಪತ್ನಿ ನಿಂಗಮ್ಮನ ಮೇಲೆ ಹಲ್ಲೆ ಮಾಡಿ ದಾರುಣವಾಗಿ ಕೊಚ್ಚಿಹಾಕಿದ್ದಾನೆ.
ನಿಂಗಮ್ಮ ಏಳು ತಿಂಗಳ ಗರ್ಭಿಣಿಯಾಗಿದ್ದಳೆಂದು ತಿಳಿದು ಬಂದಿದೆ.ಆಕೆಯ ತಾಯಿ ಮತ್ತು ತಂದೆ ಮೇಲೂ ಗಂಭೀರ ಹಲ್ಲೆ ಮಾಡಿದ್ದಾನೆ.
ಕೊಲೆಗಾರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನವಿಲೂರಿನಲ್ಲಿ ಈಗ ಉದ್ವಿಗ್ನ ಸ್ಥಿತಿ ಇದ್ದು ಪೊಲೀಸರು ಗ್ರಾಮದಲ್ಲಿ ಮೊಕ್ಕಾಮ್ ಹೂಡಿದ್ದಾರೆ.