ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣ: ನಾಲ್ವರ ಬಂಧನ -ಅಲೋಕ್ ಕುಮಾರ್

ಮಂಗಳೂರು: ಮಂಗಳೂರು ಆಟೋದಲ್ಲಿ ಕುಕ್ಕರ್ ಬ್ಲಾಸ್ಟ್ ಪ್ರಕರಣ ಸಂಬಂಧ ಇದುವರೆಗೆ ನಾಲ್ಕು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಡಿಜಿಪಿ ಅಲೋಕ್ ಕುಮಾರ್ ‌ತಿಳಿಸಿದರು.

ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು,ಮಾಝ್, ಯಾಸೀನ್ ಬಂಧನವಾಗಿದೆ.

ಮತ್ತೊಬ್ಬನನ್ನು ಊಟಿಯಿಂದ ಕರೆತರಲಾಗಿದೆ ಎಂದು ‌ಹೇಳಿದರು.

ತೀರ್ಥ ಹಳ್ಳಿಯ ಮಥೀನ್ ಕೂಡಾ ಪ್ರಮುಖ ಆರೋಪಿಯಾಗಿದ್ದು ಮಂಗಳೂರಿನಲ್ಲಿ ದೊಡ್ಡ ಅನಾಹುತ ತಪ್ಪಿತಲ್ಲ ಎಂಬ ನೆಮ್ಮದಿ ಇದೆ ಎಂದು ತಿಳಿಸಿದರು.

ಮತ್ತೊಬ್ಬ‌ ಅರಾಫತ್ ಆಲಿಗಾಗಿ‌ ಶೋಧ ಕಾರ್ಯ ಮುಂದುವರಿಸಿದ್ದೇವೆ ಎಂದು ಹೇಳಿದರು.

ಮೈಸೂರಿನಲ್ಲಿ ಪ್ರಮುಖ ಆರೋಪಿ‌ ಶಾರೀಕ್ ವಾಸವಿದ್ದ ಮನೆಗೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದ್ದು ಅಲ್ಲಿಗೆ ಯಾರಿಗೂ ಪ್ರವೇಶವಿರುವುದಿಲ್ಲ ಎಂದು ತಿಳಿಸಿದರು.

ಶಾರೀಕ್ ಕುಕ್ಕರ್ ಬಾಂಬ್ ಸರಿಯಾಗಿ ಜೋಡಿಸಿರಲಿಲ್ಲ,ಜತೆಗೆ ಕಡಿಮೆ ಸಾಂದ್ರತೆ ಇದ್ದುದರಿಂದ ದೊಡ್ಡಮಟ್ಟದ ಸ್ಪೋಟವಾಗಿಲ್ಲ.

ಶಿವಮೊಗ್ಗ ಪ್ರಕರಣದಲ್ಲಿ ಮಾಝ್ ಜತೆ ಶಾರೀಕ್ ಕೂಡಾ ಸೇರಿದ್ದ.ಇಬ್ಬರೂ ಬಾಂಬ್ ಸ್ಪೋಟ ಪ್ರಯೋಗವನ್ನು ಜೊತೆಯಾಗಿ ಮಾಡಿದ್ದಾರೆ ಎಂದು ಅಲೋಕ್ ಕುಮಾರ್ ತಿಳಿಸಿದರು.