ಎಚ್ ಡಿ ಕೆಗೆ ಡಿ.ಕೆ.ಶಿವಕುಮಾರ್ ಟಾಂಗ್

ಬೆಂಗಳೂರು: ಹೆಚ್.ಡಿ ಕುಮಾರಸ್ವಾಮಿ ಅವರು ತಮ್ಮ ಸಮಾಧಾನಕ್ಕೆ ಏನಾದರೂ ಮಾತನಾಡಲಿ, ಪಾಪ ಅವರು ಈಗಿನ್ನೂ ವಿಶ್ರಾಂತಿ ತೆಗೆದುಕೊಂಡು ಬಂದಿದ್ದಾರೆ ಎಂದು ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಕೂಡಾ ಟಾಂಗ್​ ನೀಡಿದರು.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೆಚ್.ಡಿ ಕುಮಾರಸ್ವಾಮಿ ವರ್ಗಾವಣೆ ದಂಧೆ ಆರೋಪಕ್ಕೆ ಡಿ.ಕೆ.ಶಿ ವ್ಯಂಗ್ಯವಾಡಿದರು.

ವಾಮಮಾರ್ಗದಿಂದ ಅಧಿಕಾರಕ್ಕೆ ಬಂದಿದೆ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ
ಮಾಯನೋ ಜ್ಯೋತಿಷ್ಯನೋ, ಧರ್ಮನೋ, ಶ್ರಮನೋ ಅಂತೂ 3 ವರ್ಷದ ಶ್ರಮ ಇದೆ. ಕಾರ್ಯಕರ್ತರನ್ನ ಮಲಗಲು ಬಿಟ್ಟಿಲ್ಲ‌,ಹಗಲಿರುಳು ದುಡಿದು ಅಧಿಕಾರ‌ ತಂದುಕೊಟ್ಟಿದ್ದಾರೆ, ಕುಮಾರಸ್ವಾಮಿಗೆ ಖುಷಿ ಸಿಗುವುದಾದರೇ ಮಾತನಾಡಲಿ ಬಿಡಿ ಎಂದು ಹೇಳಿದರು.