ಮಂಡ್ಯ:ಕುಡಿದ ಮತ್ತಿನಲ್ಲಿ ಸರ್ಕಾರಿ ಬಸ್ ಗೆ ಕಿಡಿಗೇಡಿಗಳು ಕಲ್ಲು ತೂರಿದ ಘಟನೆ ಮಂಡ್ಯದ ಮದ್ದೂರು ಪಟ್ಟಣದಲ್ಲಿ ನಡೆದಿದೆ.
ಬಸ್ ಗೆ ಹತ್ತಿಸಿಕೊಳ್ಳಲಿಲ್ಲ ಎಂಬ ಕಾರಣಕ್ಕೆ ಮದ್ದೂರು ಪಟ್ಟಣದ ಕೊಪ್ಪ ವೃತ್ತದ ಬಳಿ ಕೆಎಸ್ ಆರ್ ಟಿ ಸಿ ಬಸ್ ಗೆ ಕಲ್ಲು ತೂರಿದ್ದಾರೆ.
ಕಂಠ ಪೂರ್ತಿ ಕುಡಿದು ಬೆಂಗಳೂರಿಗೆ ತೆರಳುತ್ತಿದ್ದ ಬಸ್ ಹತ್ತಲು ಯುವಕರು ಮುಂದಾಗಿದ್ದಾರೆ,ಆಗ ನಿರ್ವಾಹಕ ಬಸ್ ಗೆ ಹತ್ತಿಸಿಕೊಳ್ಳಲು ನಿರಾಕರಿಸಿ ಮುಂದೆ ಸಾಗಿ ದ್ದಾರೆ.
ಬಸ್ ಮುಂದೆ ಹೋಗುತ್ತಿದ್ದಂತೆ ಸಿಟ್ಟಿಗೆದ್ದ ಪುಂಡರು ಹಿಂದಿನಿಂದ ಬಸ್ ಗೆ ಕಲ್ಲು ತೂರಿದ್ದಾರೆ.ಇದರಿಂದ ಹಿಂಬದಿ ಗ್ಲಾಸ್ ಒಡೆದು ಬಸ್ ನಲ್ಲಿದ್ದ ಇಬ್ಬರು ಪ್ರಯಾ ಣಿಕರಿಗೆ ಗಾಯಗೊಂಡಿದ್ದಾರೆ.
ತಕ್ಷಣ ಬಸ್ ನಿಲ್ಲಿಸಿ ಚಾಲಕ, ನಿರ್ವಾಹಕ ಹಾಗೂ ಪ್ರಯಾಣಿಕರು ಸೇರಿ ಒಬ್ಬ ಯುವಕನನ್ನು ಹಿಡಿದಿದ್ದಾರೆ, ನಾಲ್ವರು ಯುವಕರು ಓಡಿಹೋಗಿದ್ದು,ಒಬ್ಬನನ್ನು
ಮದ್ದೂರು ಪೊಲೀಸರ ವಶಕ್ಕೆ ನೀಡಿ ದೂರು ದಾಖಲಿ ಸಿದ್ದಾರೆ.