ಹುಬ್ಬಳ್ಳಿ: ಲೋಕಸಭೆ ಅಧಿವೇಶನವನ್ನು ಸೆ. 14ರಿಂದ ನಡೆಸಲು ತೀರ್ಮಾಸಲಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ನಗರದಲ್ಲಿ ಸಚಿವರು ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಸೆ. 14 ರಿಂದ ಅ.1 ರವೆರಗೆ ಅಧಿವೇಶನ ನಡೆಸಲಾಗುತ್ತದೆಂದು ಅವರು ತಿಳಿಸಿದರು.
ರಾಜ್ಯಸಭೆ, ಲೋಕಸಭೆ ಎರಡೂ ಕಡೆ ಅಧಿವೇಶನ ನಡೆಸಲಾಗುವುದೆಂದರು.
ಪ್ರಶ್ನೋತ್ತರ ವೇಳೆಯನ್ನ ಒಂದು ಗಂಟೆಗೆ ನಿಗದಿಗೊಳಿಸಲಾಗಿದೆ ಎಂದು ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಅಧಿವೇಶನಕ್ಕೆ ತೃಣಮೂಲ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ಆದರೆ ಅವರು ಪಶ್ಚಿಮ ಬಂಗಾಳ, ರಾಜಸ್ಥಾನದಲ್ಲಿ ಒಂದೇ ದಿನ ಅಧಿವೇಶನ ನಡೆಸಿ ಎಲ್ಲಾ ಬಿಲ್ ಗಳನ್ನ ಪಾಸ್ ಮಾಡಿದ್ದಾರೆಂದರು.
ಚೆನ್ನಮ್ಮ ವೃತ್ತದಲ್ಲಿ ಫ್ಲೈ ಒವರ್ ನಿರ್ಮಾಣಕ್ಕೆ ಈಗಾಗಲೇ ನಮ್ಮ ಸರ್ಕಾರ ಆದೇಶ ಮಾಡಿದೆ. ಮೊದಲ ಹಂತದಲ್ಲಿ 300 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಟ್ರಾಫಿಕ್ ಫ್ರೀ ಹುಬ್ಬಳ್ಳಿ-ಧಾರವಾಡ ನಗರವನ್ನಾಗಿ ಮಾಡುತ್ತಿದ್ದೇವೆ.
ಇದಕ್ಕಾಗಿ ಒಟ್ಟು 600 ಕೋಟಿ ಯೋಜನೆ ರೂಪುಗೊಳ್ಳಲಿದೆ ಎಂದು ಅವರು ತಿಳಿಸಿದರು.
ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಕೆಲವು ಪ್ರಭಾವಿಗಳು ಇದ್ದಾರೆ ಎನ್ನೋ ವದಂತಿ ಇದೆ. ಯಾರೇ ಇರಲಿ ಕಠಿಣ ಕ್ರಮ ಕೈಗೊಳ್ಳಲು ನಾನು ಆಗ್ರಹಿಸುತ್ತೇನೆ. ಗೃಹ ಸಚಿವರೊಂದಿಗೆ ಈ ಬಗ್ಗೆ ನಾನು ಮಾತನಾಡಿದ್ದೇನೆಂದರು.
ಅವಳಿ ನಗರದ ಪೆÇಲೀಸ್ ಆಯುಕ್ತರಿಗೂ ಗಾಂಜಾ ಹಾಗೂ ಕ್ರೈಂ ನಿಯಂತ್ರಣ ಮಾಡಲು ಸೂಚಿಸಿದ್ದೇನೆಂದರು.