ಮಧ್ಯರಾತ್ರಿಯಿಂದಲೇ ಹಾಲು-ಮೊಸರಿನ ದರ ಎರಡು ರೂ ಏರಿಕೆ: ಸರ್ಕಾರಕ್ಕೆ ಸೆಡ್ಡು ಹೊಡೆದ ಜಾರಕಿಹೊಳಿ

ಬೆಂಗಳೂರು: ಅಂತೂ ಇಂತೂ ಕಡೆಗೂ ಕೆಎಂಎಫ್ ಹಾಲು ಮೊಸರಿನ ಬೆಲೆ ಏರಿಸಿ ಸಾರ್ವಜನಿಕರಿಗೆ ಬರೆ ಎಳೆದಿದೆ‌
ಕಳೆದವಾರವಷ್ಟೇ ಕೆಎಂಎಫ್ ‌ಹಾಲು,ಮೊಸರಿನ ಬೆಲೆಯನ್ನು 3ರೂ‌ ಏರಿಸುವುದಾಗಿ ತಿಳಿಸಿತ್ತು.ಕಡೆಗೆ ಸಿಎಂ ಒಪ್ಪಿಗೆಗೆ ಮನವಿ ಸಲ್ಲಿಸಲಾಗಿತ್ತು.
ಆದರೆ ಚೆಂಡು ಕೆಎಂಎಫ್ ಅಂಗಳಕ್ಕೆ ವಾಪಸ್ ಬಂದಿತು.
ಏಕೆಂದರೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಧ್ಯಕ್ಕೆ ಹಾಲು ಮೊಸರಿನ‌ ಬೆಲೆ ಏರಿಕೆ ಇಲ್ಲ.ಕೆಎಂಎಫ್ ಗೆ ಎರಡು ದಿನ ಡೆಡ್ ಲೈನ್ ನೀಡಿ ದರ ಏರಿಸದಂತೆ‌ ಸೂಚಿಸಿದ್ದರು.
ಆದರೆ ಕೆಎಂಎಫ್ ‌ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ‌ ಮುಖ್ಯ ಮಂತ್ರಿಗಳಿಗೇ ಸೆಡ್ಡು ಹೊಡೆದು ಕಡೆಗೂ ಹಾಲು ಮೊಸರಿನ ದರ ಏರಿಸಿದ್ದಾರೆ.
ಬುಧವಾರ ಮಧ್ಯ ರಾತ್ರಿಯಿಂದಲೇ 3ರೂ ಬದಲಿಗೆ 2ರೂ ಏರಿಕೆ ಮಾಡಿ ಸೆಡ್ಡು ಹೊಡೆದಿದ್ದಾರೆ.