ಮಹಾರಾಷ್ಟ್ರ ಸಿಎಂ ಉದ್ಬವ್ ಠಾಕ್ರೆ ಮೆಂಟಲ್ ಆಗಿರಬೇಕು -ಸಚಿವ ಬಿ.ಸಿ.ಪಾಟೀಲ್

ಮೈಸೂರು: ಮಹಾರಾಷ್ಟ್ರ ಸಿಎಂ ಉದ್ಬವ್ ಠಾಕ್ರೆ ಮೆಂಟಲ್ ಆಗಿರಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ನಗರದಲ್ಲಿ ಮಂಗಳವಾರ ಸಚಿವ ಬಿ.ಸಿ.ಪಾಟೀಲ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಬೆಳಗಾವಿ ಗಡಿ ಖ್ಯಾತೆ ಕುರಿತು ಸಚಿವ ಬಿ.ಸಿ.ಪಾಟೀಲ್ ಪ್ರತಿಕ್ರಿಯಿಸಿ, ಉದ್ಬವ್ ಠಾಕ್ರೆ ಮಾನಸಿಕವಾಗಿ ಸ್ವಲ್ಪ ವ್ಯತ್ಯಾಸ ಆಗಿದ್ದರೆ ಹೋಗಿ ಆಸ್ಪತ್ರೆಗೆ ಸೇರಿಕೊಳ್ಳಲಿ ಎಂದರು.
ಅವರು ಹೋಗಿ ಮೆಂಟಲ್ ಆಸ್ಪತ್ರೆ ಸೇರಿಕೊಳ್ಳಲಿ. ಅದು ಬಿಟ್ಟು ಸುಮ್ಮನೆ ಕರ್ನಾಟಕದ ಗಡಿ ವಿಚಾರಕ್ಕೆ ಬರಬೇಡಿ ಎಂದು ಬಿ.ಸಿ.ಪಾಟೀಲ್ ಮಹಾರಾಷ್ಟ್ರ ಸಿಎಂ ಉದ್ಬವ್ ಠಾಕ್ರೆ ಅವರಿಗೆ ಎಚ್ಚರಿಸಿದರು.
ಕರ್ನಾಟಕದ ಒಂದು ಸೂಜಿಗಾತ್ರದ ಭೂಮಿಯನ್ನು ಮಹಾರಾಷ್ಟ್ರಕ್ಕೆ ನೀಡೋಲ್ಲ ಎಂದು ಅವರು ಹೇಳಿದರು.
ಮಹಾಜನ ವರದಿ ಜಾರಿಯಾಗಬೇಕು. ಅದೇ ಅಂತಿಮ ಎಂದು ಬಿ. ಸಿ. ಪಾಟೀಲ್ ತಿಳಿಸಿದರು.
ಠಾಕ್ರೆ ರಾಜಕೀಯ ತೆವಲಿಗೆ ಮಾತನಾಡುತ್ತಿದ್ದಾರೆ. ಅಲ್ಲಿ ರಾಜಕೀಯ ಬೆಳೆ ಬೆಯಿಸಿಕೊಳ್ಳಲು ಇಲ್ಲಿ ಹುಳಿ ಹಿಂಡುತ್ತಿದ್ದಾರೆಂದರು.