ಮೈಸೂರು: ಮೈಸೂರಲ್ಲಿ ಮಹಿಷಾ ದಸರಾ ಆಚರಣೆಗೆ ರಾಜ್ಯ ಸರಕಾರ ಅವಕಾಶ ನೀಡಬೇಕು ಎಂದು ಮಹಿಷಾ ದಸರಾ ಸಮಿತಿ ಅಧ್ಯಕ್ಷ, ಮಾಜಿ ಮೇಯರ್ ಪುರುಷೋತ್ತಮ್ ಆಗ್ರಹಿಸಿದ್ದಾರೆ.
ನಗರದಲ್ಲಿ ಸೋಮವಾರ ಪುರುಷೋತ್ತಮ್ ಸುದಿಗೋಷ್ಠಿ ನಡೆಸಿ ಮಾತನಾಡಿದರು.
ಅ. 15ರ ಅಮಾವಾಸ್ಯೆ ದಿನದಂದು ಮಹಿಷಾ ದಸರಾ ಮಾಡುತ್ತೇವೆ. ಇದಕ್ಕೆ ರಾಜ್ಯ ಸರ್ಕಾರ ಯಾವುದೇ ವಿರೋಧ ಮಾಡದೇ ಅನುಮತಿ ನೀಡಬೇಕು ಎಂದು ಅವರು ಹೇಳಿದರು.
ಮಹಿಷಾ ದಸರಾಕ್ಕೆ ಮೈಸೂರು ಪೆÇೀಲಿಸ್ ಇಲಾಖೆ ಅನುಮತಿ ನೀಡಬೇಕು. ಅನುಮತಿ ಕೊಟ್ಟರು ಮಾಡುತ್ತೇವೆ. ಕೊಡದೇ ಇದ್ದರೂ ಮಾಡುತ್ತೇವೆ ಎಂದು ಅವರು ತಿಳಿಸಿದರು.