ಮಲ ಮಗಳ ಮೇಲೆ ಅತ್ಯಾಚಾರ: ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ

ಚಾಮರಾಜನಗರ: ಮಲ ಮಗಳ ಮೇಲೆ  ಲೈಂಗಿಕ ದೌರ್ಜನ್ಯ ನಡೆಸಿದ ವ್ಯಕ್ತಿಗೆ ಮಕ್ಕಳ ಸ್ನೇಹಿ ಹಾಗೂ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ನಿಶಾರಾಣಿ ಅವರು 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದ್ದಾರೆ.

ಆರೋಪಿಯ ಕೃತ್ಯ ಸಾಕ್ಷಿದಾರರ ಹೇಳಿಕೆ ಹಾಗೂ ವೈದ್ಯಕೀಯ ಪರೀಕ್ಷಾ ವರದಿಗಳಿಂದ ದೃಡಪಟ್ಟ ಹಿನ್ನಲೆಯಲ್ಲಿ ನ್ಯಾಯಾಧೀಶರಾದ ನಿಶಾರಾಣಿ ಅವರು 20  ವರ್ಷಗಳ ಕಠಿಣ ಶಿಕ್ಷೆ 5 ಸಾವಿರ ದಂಡ ವಿದಿಸಿ ಆದೇಶ ಹೊರಡಿಸಿದೆ.

ಮೈಸೂರಿನ‌ ಗೌಸಿಯನಗರದ ವಾಸಿ ಆಟೋಚಾಲಕ ಸೈಯದ್ ಮುಜಾಮಿಲ್ @ ಶಾರು (45) ಎಂಬಾತನಿಗೆ ನ್ಯಾಯಾಲಯ ಶಿಕ್ಷೆ‌ ವಿಧಿಸಿದೆ.

ಈತ ಇಬ್ಬರನ್ನು ಮದುವೆ ಆಗಿದ್ದು, ಮೊದಲನೇ ಹೆಂಡತಿ ಈತನಿಂದ ದೂರವಾಗಿದ್ದು, 2ನೇ ಪತ್ನಿ  ಮೃತಪಟ್ಟಿದ್ದಾರೆ.

ಆರೋಪಿಯು ನಂತರ ನೊಂದ ಬಾಲಕಿಯ ತಾಯಿಯನ್ನು ಮದುವೆ ಆಗಿದ್ದ.

2022 ಜನವರಿ 4 ಗಂಟೆ ಸಮದಯಲ್ಲಿ ಪತ್ನಿ ಇಲ್ಲದ ಸಮಯದಲ್ಲಿ 5 ವರ್ಷದ ಅಪಾಪ್ತ ನೊಂದ ಬಾಲಕಿಯ ಮೇಲೆ ಆರೋಪಿಯು ಲೈಂಗಿಕ ದೌರ್ಜನ್ಯ ಎಸಗಿದ್ದ.

ಸೈಯದ್ ಈ ಹೇಯ ಕೃತ್ಯವೆಸಗಿರುವುದು ಸಾಕ್ಷಿದಾರರ ಹೇಳಿಕೆ ಹಾಗೂ ವೈದ್ಯಕೀಯ ಪರೀಕ್ಷಾ ವರದಿಗಳಿಂದ ಮತ್ತು ಇತರೆ ದಾಖಲಾತಿಗಳಿಂದ ದೃಢಪಟ್ಟಿದೆ.

ಚಾಮರಾಜನಗರ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖಾಧಿಕಾರಿ ವೃತ್ತ ನಿರೀಕ್ಷಕ ಬಿ. ಮಹೇಶ್ ರವರು ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು.

ಆರೋಪಿ ಸೈಯದ್ ಮುಜಾಮಿಲ್ ಆಲಿಯಾಸ್ ಶಾರುವಿಗೆ 20 ವರ್ಷ ಕಠಿಣ ಶಿಕ್ಷೆ,5 ಸಾವಿರ ದಂಡ, ದಂಡ ತೆರಲು ತಪ್ಪಿದಲ್ಲಿ 6 ತಿಂಗಳ ಶಿಕ್ಷೆ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.

ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧೀಕಾರದಿಂದ 6 ಲಕ್ಷ ರೂಪಾಯಿಗಳನ್ನು 30 ದಿನದ ಒಳಗೆ ನೊಂದ ಬಾಲಕಿಗೆ ಪರಿಹಾರದ ರೂಪದಲ್ಲಿ ನೀಡಬೇಕೆಂದು ಆದೇಶಿಸಿ ನ್ಯಾಯಾಲಯವು ತೀರ್ಪು ನೀಡಿದೆ.

ಕೆ.ಯೋಗೇಶ್ ಅವರು ಸರ್ಕಾರದ ಪರವಾಗಿ  ವಾದ ಮಂಡಿಸಿದರು.