ಮನ್‌ ಕಿಬಾತ್‌ ನಲ್ಲಿ ಅಂಗಾಂಗ ದಾನಕ್ಕೆ ಮೋದಿ ಕರೆ

ನವದೆಹಲಿ: ದೇಶವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅಂಗಾಂಗ ದಾನಕ್ಕೆ ಮುಂದೆ ಬರಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದರು.

ಮನ್ಕಿ ಬಾತ್ಕಾರ್ಯಕ್ರಮದಲ್ಲಿ ಮೋದಿ ಅವರು ಭಾನುವಾರ ಮಾತನಾಡಿದರು.

ಒಬ್ಬ ವ್ಯಕ್ತಿಯ ಅಂಗಾಂಗ ದಾನದಿಂದ 8ರಿಂದ 9 ಮಂದಿಗೆ ಜೀವದಾನ ಮಾಡಬಹುದು. ಅಂಗಾಂಗ ದಾನಕ್ಕೆ ಕನಿಷ್ಠ ವಯಸ್ಸು 65 ವರ್ಷ ಎಂಬ ನಿರ್ಬಂಧವನ್ನೂ ಸರ್ಕಾರ ತೆಗೆದುಹಾಕಿದೆ. ದೇಶವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಬೇಕೆಂದು ಪ್ರಧಾನಿ ಅವರು ತಿಳಿಸಿದರು.

ಇತರರಿಗೆ ಹೊಸ ಜೀವನ ನೀಡುವ ನಿಟ್ಟಿನಲ್ಲಿ ಜನರನ್ನು ಉತ್ತೇಜಿಸಲು ಸರ್ಕಾರವು ಹಲವಾರು ನಿಯಮಗಳನ್ನು ಸಡಿಲಿಸಿದೆ ಎಂದು ತಿಳಿಸಿ,  ವ್ಯಕ್ತಿಯು ಯಾವುದೇ ರಾಜ್ಯಕ್ಕೆ ಹೋಗಿ ಅಂಗಾಂಗ ದಾನಕ್ಕಾಗಿ ನೋಂದಾಯಿಸಿ ಕೊಳ್ಳಬಹುದು.

ಅಂಗಾಂಗ ದಾನಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಸರ್ಕಾರ ಅದಕ್ಕೆ ಸಂಬಂಧಿಸಿದ ಕನಿಷ್ಠ ವಯೋಮಿತಿ ಮತ್ತು ವಾಸಸ್ಥಳ ನಿಯಮವನ್ನು ತೆಗೆದುಹಾಕಿದೆ ಎಂದು ಪ್ರಧಾನಿ ಅವರು ತಿಳಿಸಿದರು.

ನಿಮ್ಮ ಒಂದು ನಿರ್ಧಾರವು ಅನೇಕ ಜೀವಗಳನ್ನು ಉಳಿಸಬಹುದು. ಅನೇಕ ಜೀವಗಳಿಗೆ ಜೀವದಾನ ಮಾಡಬಹುದು ಎಂದು ಪ್ರಧಾನಿ ಮೋದಿ ತಿಳಿಸಿದರು.

ಈಗಮನ್ಕಿ ಬಾತ್‌’ 99ನೇ ಸಂಚಿಕೆ ಮುಗಿಸಿದ್ದು, 100ನೇ ಸಂಚಿಕೆಗೆ ನಿಮ್ಮೆಲ್ಲರ ಸಲಹೆಗಳನ್ನು ಪಡೆಯಲು ನಾನು ತುಂಬಾ ಉತ್ಸುಕನಾಗಿದ್ದೇನೆ. ನಿಮ್ಮ ಸಲಹೆಗಳು 100 ನೇ ಸಂಚಿಕೆಯನ್ನು ಇನ್ನಷ್ಟು ಸ್ಮರಣೀಯವಾಗಿಸುತ್ತದೆ ಎಂದು ಮೋದಿ ಹೇಳಿದರು.