ವಿಜಯನಗರ : 2021-22ನೇ ಸಾಲಿನ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತ ಸಂಘ (KUWJ ) ಕೊಡಮಾಡುವ ಯಜಮಾನ್ ಟಿ. ನಾರಾಯಣಪ್ಪ ಸ್ಮಾರಕ ಪ್ರಶಸ್ತಿಯು ಮೊದಲ ಬಾರಿಗೆ ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿ ಪ್ರಜಾವಾಣಿ ಪತ್ರಿಕೆಯ ಹಿರಿಯ ವರದಿಗಾರರು ಮತ್ತು ಜಿ ನ್ಯೂಸ್ 5 ನ್ಯೂಸ್ ಪೋರ್ಟಲ್ ನ ಅಂಕಣಕಾರರಾದ ಡಾ. ಗುರುಪ್ರಸಾದ ರಾವ್ ಹವಲ್ದಾರ್ ಅವರ ಅಣ್ಣನಾದ ಎಚ್.ಎಸ್. ಶ್ರೀಹರಪ್ರಸಾದ್ ರವರಿಗೆ ಲಭಿಸಿದೆ.
ಈ ಪ್ರಶಸ್ತಿಯು ರಾಜ್ಯವನ್ನೇ ಗಮನ ಸಳೆದಂತಹ ಅತ್ಯುತ್ತಮ ಕೃಷಿ ವರದಿ ಮಾಡಿದ್ದಕ್ಕಾಗಿ ಎಚ್.ಎಸ್. ಶ್ರೀಹರಪ್ರಸಾದ್ ರವರಿಗೆ ದೊರಕಿದೆ.
ಕಳೆದ 20 ವರ್ಷಗಳಿಂದಲೂ ಪ್ರಜಾವಾಣಿ ಪತ್ರಿಕೆಯ ಮರಿಯಮ್ಮನ ಹಳ್ಳಿ ವರದಿಗಾರರಾಗಿ, ಸ್ಥಳೀಯ ಸಮಸ್ಯೆಗಳ ಬಗ್ಗೆ ಗಣಿಗಾರಿಕೆಯ ಬಗ್ಗೆ ಈ ಭಾಗದ ಕೃಷಿಯ ಸಮಸ್ಯೆಗಳ ಬಗ್ಗೆ ತಮ್ಮ ವರದಿಗಳ ಮೂಲಕ ರಾಜ್ಯ ಸರ್ಕಾರವನ್ನು ಗಮನ ಸಳೆಯುವಂತೆ ಮಾಡಿದ್ದಾರೆ.
ಅಲ್ಲದೇ ಅನೇಕ ಸಾಮಾಜಿಕ ಸಂಘ ಸಂಸ್ಥೆಗಳಿಗೆ ಸಲಹೆಗಾರರಾಗಿ, ಸಾಮಾಜಿಕ ಹೋರಾಟಗಳಲ್ಲಿ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.