ಮತಗಟ್ಟೆ ಬಳಿ ವಾಮಾಚಾರ: ಚಪ್ಪಲಿ ಹಿಡಿದು ಮಹಿಳೆಯರ ಅಸಮಾಧಾನ

ಹಾಸನ: ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೂ ಮುನ್ನ ಮತಗಟ್ಟೆ ಸಮೀಪ ವಾಮಾಚಾರ ಮಾಡಿರುವ ಘಟನೆ ನಡೆದಿದೆ.
ಜಿಲ್ಲೆಯ ಅರಕಲಗೂಡು ತಾಲೂಕಿನ ಹುಲ್ಲಂಗಾಲ ಗ್ರಾಮ ಪಂಚಾಯತಿಯ ಮತದಾನ ನಡೆಯುವ ಶಾಲೆ ಬಳಿ ವಾಮಾಚಾರ ಮಾಡಿಸಿ, ಕುಡಿಕೆಗಳನ್ನು ಮಣ್ಣಿನಲ್ಲಿ ಮುಚ್ಚಿಟ್ಟು ಪೂಜೆ ಮಾಡಲಾಗಿದೆ ಎನ್ನಲಾಗಿದೆ.
ಶಾಲೆ ಬಳಿ ವಾಮಾಚಾರ ಮಾಡಿದ ಸ್ಥಳದಲ್ಲಿ ಗ್ರಾಮಸ್ಥರು ಸೋಮವಾರ ಜಮಾಯಿಸಿ ಈ ಕೃತ್ಯ ಎಸಗಿರುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ರೀತಿ ವಾಮಾಚಾರ ಮಾಡಿದರೆ ಗ್ರಾಮಸ್ಥರೆಲ್ಲರೂ ಮತದಾನ ಮಾಡಲು ಬರಲು ಭಯವಾಗುತ್ತೆ. ಎಲ್ಲೆಲ್ಲಿ ವಾಮಾಚಾರ ಮಾಡಲಾಗಿದೆ ಅದನ್ನೆಲ್ಲ ಪತ್ತೆಹಚ್ಚಿ ತೆಗೆದುಹಾಕಬೇಕು ಇಲ್ಲದಿದ್ದರೆ ನಾಳೆ (ಮಂಗಳವಾರ) ಮತದಾನ ಮಾಡಲು ಬರುವುದಿಲ್ಲ ಎಂದು ಗ್ರಾಮದವರು ಎಚ್ಚರಿಸಿದ್ದಾರೆ.
ಮತಕೇಂದ್ರ ಬಳಿ ವಾಮಾಚಾರ ಮಾಡಿರುವವರ ವಿರುದ್ಧ ಚಪ್ಪಲಿ ಹಿಡಿದು ಮಹಿಳೆಯರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಈ ರೀತಿ ಕೃತಿ ಎಸಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಯಾರೇ ಆದರೂ ಈ ರೀತಿ ವಾಮಾಚಾರ ಮಾಡುವುದು ಸರಿಯಲ್ಲ ಎಂದು ಚಪ್ಪಲಿ ಹಿಡಿದು ಮಹಿಳೆಯರು ಅಸಮಾಧಾನ ವ್ಯಕ್ತಪಡಿಸಿದರು.
ವಾಮಾಚಾರ ಮಾಡಿರುವವರನ್ನು ಪತ್ತೆ ಹಚ್ಚುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.