ಮೊದಲು ಮಾನವರಾಗಿ -ಎಂಇಎಸ್ ನವರಿಗೆ ನೆನಪಿರಲಿ ಪ್ರೇಮ್ ಕರೆ

ಬಾಗಲಕೋಟೆ: ಎಂಇಎಸ್  ಪುಂಡರೇ ಮೊದಲು ಮಾನವರಾಗಿ, ಮಾನವೀಯತೆಯನ್ನು ತೋರಿ ಎಂದು ನಟ ನೆನಪಿರಲಿ ಪ್ರೇಮ್  ಕರೆ ನೀಡಿದ್ದಾರೆ.

ಎಂಇಎಸ್ ನಿಂದ ರಾಜ್ಯದಲ್ಲಿ ಆಗುತ್ತಿರುವ ಸಂಘರ್ಷದ ವಿರುದ್ಧ ನಟ ನೆನಪಿರಲಿ ಪ್ರೇಮ್ ಧ್ವನಿ ಎತ್ತಿದ್ದಾರೆ.

ಬಾಗಲಕೋಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎಂಇಎಸ್ ಸಂಸ್ಥೆಯನ್ನು ಬ್ಯಾನ್ ಮಾಡುವಂತೆ ನಾನೊಬ್ಬನೇ ಹೇಳುತ್ತಿಲ್ಲ.  ಇಡೀ ಕರ್ನಾಟಕದ ಜನತೆ ಒತ್ತಾಯಿಸುತ್ತಿದ್ದಾರೆ ಎಂದು ಹೇಳಿದರು.

ಎಂಇಎಸ್ ನವರಿಂದ  ಬರಿ ಕನ್ನಡಿಗರಿಗೆ ಮಾತ್ರವಲ್ಲ ಅಲ್ಲಿರುವ ಮರಾಠಿಗರಿಗೂ ತೊಂದರೆ ಆಗುತ್ತಿದೆ,ಇದನ್ನು  ಯಾರೂ ಕೂಡ ಸಹಿಸುವುದಿಲ್ಲ, ಅವರು ನಮಗೆ ತೊಂದರೆ ಕೊಡುತ್ತಿದ್ದಾರೆ ಎಂದು ನಾವು ಮರಾಠಿಗರಿಗೆ ತೊಂದರೆಯನ್ನು ಕೊಡುವುದಿಲ್ಲ. ಯಾಕೆಂದರೆ ನಾವೆಲ್ಲ ಭಾರತೀಯರು. ನಾವೆಲ್ಲರೂ ಒಂದೇ ಎಂದು ತಿಳಿದಿದ್ದೇವೆ ಎಂದು ಹೇಳಿದರು.

ನಾವು ಏನು ಮಾಡಿದರೂ ಕನ್ನಡಿಗರು ಸುಮ್ಮನಿರುತ್ತಾರೆ ಎಂದು  ತಿಳಿದುಕೊಳ್ಳಬೇಡಿ, ನಾವೆಲ್ಲ ಹೋರಾಟಕ್ಕೆ ಇಳಿದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ನೀವು ಸಂಗೊಳ್ಳಿ  ರಾಯಣ್ಣನವರ ಪ್ರತಿಮೆಯನ್ನು ಒಡೆದು ಹಾಕೀದ್ದಿರಿ. ಆದರೆ ನೀವು ಮಾಡಿರುವ ಹೀನಾಯ ಕೃತ್ಯವನ್ನು ನಾವು ಮಾಡುವುದಿಲ್ಲ. ನಾವು ಶಿವಾಜಿ ಮಹಾರಾಜರನ್ನು ಪೂಜನೀಯ ಸ್ಥಾನದಲ್ಲಿ ಇಟ್ಟಿದ್ದೇವೆ.     ಇಬ್ಬರೂ ಕೂಡ ಬ್ರಿಟಿಷರ ವಿರುದ್ಧ  ಹೋರಾಡಿದವರು, ಆದ್ದರಿಂದ ನೀವು ಮಾಡುತ್ತಿರುವ ಪುಂಡಾಟಿಕೆಯನ್ನು ಕೂಡಲೆ  ನಿಲ್ಲಿಸ ಬೇಕು ಎಂದು ಪ್ರೇಮ್ ಆಗ್ರಹಿಸಿದರು.