ಮೋಜು ಮಸ್ತಿಗಾಗಿ ದರೋಡೆ: ಐದು ಮಂದಿ ಡಕಾಯಿತರ ಸೆರೆ

ಮೈಸೂರು: ಮೋಜು ಮಸ್ತಿಗಾಗಿ ದರೋಡೆ ಮಾಡುತ್ತಿದ್ದ ಐದು ಮಂದಿ ಡಕಾಯಿತರನ್ನ ಅರೆಸ್ಟ್ ಮಾಡುವಲ್ಲಿ ಉದಯಗಿರಿ ಠಾಣೆ ಪೆÇಲೀಸರು ಯಶಸ್ವಿಯಾಗಿದ್ದಾರೆ.

ಮೈಸೂರಿನ ಎನ್.ಆರ್.ಮೊಹಲ್ಲಾದ ಸಲೀಂ ಪಾಷ(25), ಫಾಜಿಲ್ ಖಾನ್ ಹಾಗೂ ಬೆಂಗಳೂರಿನ ಸೈಯದ್ ರಿಯಾಜ್(30), ಸೈಫ್ ಆಲಿ(25) ಹಾಗೂ ಸೈಯದ್ ನಯಾಜ್(36) ಬಂಧಿತ ಆರೋಪಿಗಳು.

ಖಾಸಗಿ ಫೈನಾನ್ಸ್ ಗಳ ಪಿಗ್ಮಿ ಕಲೆಕ್ಟರ್ ಗಳು ಈ ಡಕಾಯಿತರ ಟಾರ್ಗೆಟ್ ಆಗಿದ್ದರು.

ಬಂಧಿತರಿಂದ 43,500ರೂ,ಕೃತ್ಯಕ್ಕೆ ಬಳಸುತ್ತಿದ್ದ ಡ್ರಾಗರ್, ದೊಣ್ಣೆ, ಎರಡು ಬೈಕ್ ಗಳನ್ನ ಪೆÇಲೀಸರು ವಶಪಡಿಸಿಕೊಂಡಿದ್ದಾರೆ.

ದರೋಡೆ ನಡೆಸಿದ 24 ಗಂಟೆ ಒಳಗೆ ಆರೋಪಿಗಳನ್ನ ಸೆರೆಹಿಡಿಯುವಲ್ಲಿ ಉದಯಗಿರಿ ಪೆÇಲೀಸರು ಯಶಸ್ವಿಯಾಗಿದ್ದಾರೆ.

ನವೆಂಬರ್ 24ರಂದು ಆರೋಪಿಗಳು ಸಂಚು ರೂಪಿಸಿ ಉದಯಗಿರಿ ಹಾಗೂ ಎನ್.ಆರ್.ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಿಗ್ಮಿ ಕಲೆಕ್ಟರ್ ಗಳನ್ನ ಟಾರ್ಗೆಟ್ ಮಾಡಿ ಡ್ರಾಗರ್ ತೋರಿಸಿ ಬೆದರಿಸಿ ಹಣ ದೋಚಿ ಪರಾರಿಯಾಗಿದ್ದರು.

ಉದಯಗಿರಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಪ್ರಕರಣ ಹಾಗೂ ಎನ್.ಆರ್.ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ದರೋಡೆ ನಡೆಸಿದ್ದ ಆರೋಪಿಗಳು ಮತ್ತಷ್ಟು ದರೋಡೆಗೆ ಸ್ಕೆಚ್ ಹಾಕಿದ್ದರು ಎಂದು ನಗರ ಪೆÇಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದ್ದಾರೆ.

ಬೆಂಗಳೂರಿನಿಂದ ಬಂದ ಮೂವರು ಆರೋಪಿಗಳು ಮೈಸೂರಿನ ಇಬ್ಬರು ಆರೋಪಿಗಳ ಜೊತೆ ಸೇರಿ ಕೃತ್ಯವೆಸಗಿದ್ದರು. ಲಾಡ್ಜ್ ಒಂದರಲ್ಲಿ ಕೊಠಡಿ ಬಾಡಿಗೆ ಪಡೆದು ಸಂಚು ಮಾಡುತ್ತಿದ್ದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

ನಗರ ಪೆÇಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಡಿಸಿಪಿ ಗೀತಾ ಪ್ರಸನ್ನ,ದೇವರಾಜ ವಿಭಾಗದ ಎಸಿಪಿ ಶಶಿಧರ್ ಮಾರ್ಗದರ್ಶನದಲ್ಲಿ ಉದಯಗಿರಿ ಪೆÇಲೀಸ್ ಠಾಣೆಯ ಇನ್ಸ್ ಪೆಕ್ಟರ್ ಪಿ.ಕೆ.ರಾಜು,ಎಸ್ಸೈ ಗಳಾದ ಸುನಿಲ್,ನಾಗರಾಜ ನಾಯಕ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಶಂಕರ್,ಸಿದ್ದೀಖ್ ಅಹ್ಮದ್,ಸೋಮಶೇಖರ್,ಮೋಹನ್ ಕುಮಾರ್,ಶಿವರಾಜಪ್ಪ,ಸಿಡಿಆರ್ ಸೆಲ್ ನ ಕುಮಾರ್ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ.