ಮೈಸೂರು: ಆನ್‌ಲೈನ್ ಮಟ್ಕಾ ದಂಧೆಯಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು 2 ಮೊಬೈಲ್ ಮತ್ತು 25,000 ರೂಗಳನ್ನು ವಶಪಡಿಸಿಕೊಂಡಿದ್ದಾರೆ.
ನವೆಂಬರ್ 21ರಂದು ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿ.ಇ.ಒ. ಕಛೇರಿ ಬಳಿ ಆನ್‌ಲೈನ್ ಮಟ್ಕಾ ದಂಧೆಯಲ್ಲಿ ತೊಡಗಿದ್ದ ಒಬ್ಬ ವ್ಯಕ್ತಿ ಮತ್ತು 26 ರಂದು ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಭಾ ಟಾಕೀಸ್ ಮುಂಭಾಗ ಆನ್‌ಲೈನ್ ಮಟ್ಕಾ ದಂಧೆಯಲ್ಲಿ ತೊಡಗಿದ್ದ ಮತ್ತೊಬ್ಬ ಅಸಾಮಿಯನ್ನು ಸಿಸಿಬಿ ಪೊಲೀಸರು ದಸ್ತಗಿರಿ ಮಾಡಿದ್ದಾರೆ.
ಈ ಬಗ್ಗೆ ಮಂಡಿ ಪೊಲೀಸ್ ಠಾಣಿ ಹಾಗೂ ಲಷ್ಕರ್ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಕಾರ್ಯಾಚರಣೆಯಲ್ಲಿ ಡಿಸಿಪಿ ಗೀತಪ್ರಸನ್ನ ಅವರ ಮಾರ್ಗದರ್ಶನದಲ್ಲಿ ಸಿಸಿಬಿಯ ಎಸಿಪಿ ಸಿ.ಕೆ ಅಶ್ವಥನಾರಾಯಣ ರವರ ನೇತೃತ್ವದಲ್ಲಿ ಸಿ.ಸಿ.ಬಿಯ ಸಂಘಟಿತ ಅಪರಾಧ ಮತ್ತು ರೌಡಿ ಪ್ರತಿಬಂಧಕ ದಳದ ಪೊಲೀಸ್ ನಿರೀಕ್ಷಕರಾದ ಎ . ಮಲ್ಲೇಶ್, ಎಎಸ್ಐ ರಾಜು , ಹಾಗೂ ಸಿಬ್ಬಂದಿಗಳಾದ ರಾಧೇಶ್ , ಜನಾರ್ಧನರಾವ್ , ಡಿ.ಶ್ರೀನಿವಾಸ್‌ಪ್ರಸಾದ್ , ಜೋಸೆಫ್ ನೊರೋನ್ಹ , ಪುರುಷೋತ್ತಮ್ , ರಘು , ಸುನೀಲ್ , ಅರುಣ್‌ಕುಮಾರ್ , ಎನ್.ಜಿ , ಶ್ರೀನಿವಾಸ್ , ಮಮತ ಭಾಗವಹಿಸಿದ್ದರು.
ಈ ಕಾರ್ಯವನ್ನು ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಅವರು ಪ್ರಶಂಸಿಸಿದ್ದಾರೆ.