ಮೈಸೂರು: ಮೈಸೂರಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತ ಪ್ರಕರಣದಲ್ಲಿ ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ.
ಅತಿವೇಗದಿಂದ ಬಂದ ಬುಲೆಟ್ ಬೈಕ್ ಸವಾರ ಹೋಂಡಾ ಆ್ಯಕ್ಟಿವಾದಲ್ಲಿ ಹೋಗುತ್ತಿದ್ದ ವೃದ್ಧರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ಮಂಗಳವಾರ ಬೆಳಿಗ್ಗೆ ನಗರದ ದೇವರಾಜ ಅರಸು ರಸ್ತೆಯಲ್ಲಿ ನಡೆದಿದೆ.
ಮೃತರನ್ನು ದೇವರಾಜ ಮೊಹಲ್ಲಾ ವಾಸಿ ರಾಘವೇಂದ್ರ ಗಾರ್ಮೆಂಟ್ಸ್ ಮಾಲೀಕ ಸತ್ಯಪ್ಪ (70) ಎಂದು ಗುರುತಿಸಲಾಗಿದೆ.
ಇವರು ತಮ್ಮ ಮನೆಯಿಂದ ಬಟ್ಟೆ ಮಳಿಗೆ ತೆರೆಯಲು ಅರಸು ರಸ್ತೆ ಕಡೆ ಹೋಗುತ್ತಿದ್ದರು. ಆಗ ಅಜಾಗರೂಕತೆ ಮತ್ತು ಅತಿವೇಗದಿಂದ ಬುಲೆಟ್ ಬೈಕ್ ನಲ್ಲಿ ಬಂದ ಸವಾರ ಇವರ ಆ್ಯಕ್ಟಿವಾಕ್ಕೆ ಡಿಕ್ಕಿ ಹೊಡೆದುದರಿಂದ ಅವರು ವಾಹನದಿಂದ ಕೆಳಕ್ಕೆ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ದೇವರಾಜ ಪೆÇಲೀಸ್ ಠಾಣೆಯ ಇನ್ಸಪೆಕ್ಟರ್ ಮುನಿಯಪ್ಪ, ಸಿಬ್ಬಂದಿಗಳಾದ ಡಾ.ಲಿಂಗರಾಜು, ರವಿ, ರಘು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬುಲೆಟ್ ಬೈಕ್ ಸವಾರ ಅಪಘಾತವಾದ ತಕ್ಷಣ ವಾಹನ ಬಿಟ್ಟು ಪರಾರಿಯಾಗಿದ್ದಾನೆ.
ಆರೋಪಿ ಪತ್ತೆಗಾಗಿ ಪೆÇಲೀಸರು ಬಲೆ ಬೀಸಿದ್ದಾರೆ.
ಈ ಬಗ್ಗೆ ದೇವರಾಜ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2ನೇ ಪ್ರಕರಣ: ಎರಡು ಕಾರುಗಳ ನಡುವೆ ಪರಸ್ಪರ ಡಿಕ್ಕಿ ಆಗಿರುವ ಘಟನೆ ಮೈಸೂರಿನ ಹಾರ್ಡಿಂಜ್ ಸರ್ಕಲ್ ನಲ್ಲಿ ಸೋಮಾವರ ಬೆಳಿಗ್ಗೆ ನಡೆದಿದೆ.
ಎರಡು ಕಾರುಗಳ ಮಾಲೀಕರು ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿ ಆಗಿದ್ದಾರೆ.
ಬನ್ನೂರು ರಸ್ತೆಯಿಂದ ಅತಿವೇಗದಲ್ಲಿ ಬರುತ್ತಿದ್ದ ಕಾರು ಮತ್ತು ಮೈಸೂರು-ಬೆಂಗಳೂರು ರಸ್ತೆಯಿಂದ ಬರುತ್ತಿದ್ದ ಕಾರು ಪರಸ್ಪರ ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದವರು ಮದ್ಯದ ನಶೆಯಲ್ಲಿದ್ದಂತೆ ಕಾಣಿಸುತ್ತಿದ್ದರೆಂದು ಪೆÇಲೀಸರಿಗೆ ಸಾರ್ವಜನಿಕರು ತಿಳಿಸಿದ್ದಾರೆ.
ಕಾರು ಯಾರಿಗೆ ಸೇರಿದ್ದು, ಕಾರಿನಲ್ಲಿ ಇದ್ದವರ್ಯಾರು ಎಂಬುದನ್ನು ಪೆÇಲೀಸರು ಪತ್ತೆ ಹಚ್ಚಲು ಮುಂದಾಗಿದ್ದಾರೆ.
ದೇವರಾಜ ಸಂಚಾರಿ ಠಾಣೆ ಪೆÇಲೀಸರು ಕಾರನ್ನು ವಶಕ್ಕೆ ಪಡೆದಿದ್ದಾರೆ.