ನಿರ್ಗತಿಕ ವ್ಯಕ್ತಿ ಸಾವು; ಕೊಲೆ ಶಂಕೆ

ಮೈಸೂರು, ಸೆ. 30- ನಿರ್ಗತಿಕ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ.
ಮೆಟ್ರೊಪೆÇೀಲ್ ಸರ್ಕಲ್ ನ ಸಮೀಪದ ಬಸ್ ನಿಲ್ದಾಣದಲ್ಲಿ ನಿರ್ಗತಿಕ ವ್ಯಕ್ತಿ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಬುಧವಾರ ಬೆಳಗ್ಗೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಡಿಸಿಪಿಗಳಾದ ಡಾ.ಎ.ಎನ್.ಪ್ರಕಾಶ್ ಗೌಡ, ಗೀತಾ ಪ್ರಸನ್ನ, ಲಕ್ಷ್ಮಿಪುರಂ ಠಾಣೆ ಇನ್ಸಪೆಕ್ಟರ್ ಪ್ರಕಾಶ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ನಿರ್ಗತಿಕ ವ್ಯಕ್ತಿಯನ್ನು ಯಾರೋ ಕೊಲೆ ಮಾಡಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ.
ಮೃತ ವ್ಯಕ್ತಿ ಬಳಿ ಹಲವು ವಿಸಿಟಿಂಗ್ ಕಾಡ್ ್ಗಳು, ಕೆಲವರ ಆಧಾರ್ ಕಾಡ್ ್ಗಳು ಪತ್ತೆ ಆಗಿದೆ.
ಈ ಬಗ್ಗೆ ಲಕ್ಷ್ಮಿಪುರಂ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.