ಮೈಸೂರು: ತಾತಯ್ಯರವರ ಜಯಂತಿಯನ್ನು ನಗರದಲ್ಲಿ ಮೈಸೂರು ನಗರ ಬ್ರಾಹ್ಮಣ ಸಂಘದ ವತಿಯಿಂದ ಶನಿವಾರ ಆಚರಿಸಲಾಯಿತು.
ವೃದ್ಧಪಿತಾಮಹ ದಯಾಸಾಗರ ಮೈಸೂರು ಸಂಸ್ಥಾನದ ರಾಜಗುರು ಮಗ್ಗೆ ವೆಂಕಟಕೃಷ್ಣಯ್ಯ ಅವರ 176ನೇ ಜಯಂತಿಯನ್ನು
ನಗರದ ಬಸ್ ನಿಲ್ದಾಣದ ಬಳಿ ಇರುವÀ ತಾತಯ್ಯ ಉದ್ಯಾನವನದಲ್ಲಿ ಆಚರಿಸಲಾಯಿತು.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ತಾತಯ್ಯರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಸಚಿವ ಎಸ್.ಟಿ ಸೋಮಶೇಖರ್ ರವರು ಮಾತನಾಡಿ, ದಯಾಸಾಗರ ತಾತಯ್ಯನವರು ಸ್ವತಃ ಶಿಕ್ಷಕರೇ ಆಗಿದ್ದರು ಅವರ ಅನಾಥಾಲಯದಲ್ಲಿ ಶಿಕ್ಷಣ ಪಡೆದ ಸಹಸ್ರಾರು ಮಂದಿ ಇಂದು ವಿಶ್ವದ ಅನೇಕ ಕಡೆ ಉನ್ನತ ಸ್ಥಾನದಲ್ಲಿರುವುದು ನಮ್ಮ ಮೈಸೂರಿಗೆ ಹೆಮ್ಮೆಯ ವಿಚಾರ ಎಂದರು.
ನಂತರ ಕೆ. ರಘುರಾಂ ವಾಜಪೇಯಿ ರವರು ಮಾತನಾಡಿ, ಶಿಕ್ಷಣ ಕಾಶಿ ಎಂದು ಮೈಸೂರು ವಿಶ್ವವಿದ್ಯಾನಿಲಯ ಮುಂದೆ ತರಲು ಯೋಜನೆ ರೂಪಿಸಿದ ಸರ್ ಎಂ ವಿಶ್ವೇಶ್ವರಯ್ಯರವರಿಗೆ ಮಾರ್ಗದರ್ಶನ ಸ್ಪೂರ್ತಿ ನೀಡಿದವರೇ ತಾತಯ್ಯನವರು ಎಂದರು.
ಆ ನಂತರ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿಟಿ. ಪ್ರಕಾಶ್ ಅವರು ಮತನಾಡಿ, ಸಾಧಾರಣ ಶಿಕ್ಷಕರಾಗಿದ್ದ ತಾತಯ್ಯನವರಿಗೆ ಘನ ಸರ್ಕಾರ ಪ್ರತಿಮೆ ಸ್ಥಾಪಿಸಿ ಗೌರವ ಸಲ್ಲಿಸಿದೆ. ತಾತಯ್ಯರವರ ಜಯಂತಿಯನ್ನು ಮುಂದಿನ ವರ್ಷದಿಂದ ಪುರಭವನದಲ್ಲಿ ಆಚರಿಸಲು ನಗರಪಾಲಿಕೆ ಜಿಲ್ಲಾಡಳಿತ ಮುಂದಾಗಬೇಕು ಮತ್ತು ಸಮಾಜದಲ್ಲಿ ಶ್ರಮಿಸುತ್ತಿರುವ ಸಾಧಕರನ್ನು ಸರ್ಕಾರ ಗುರುತಿಸಿ ತಾತಯ್ಯ ಪ್ರಶಸ್ತಿ ಪ್ರದಾನ ಮಾಡಲು ಮುಂದಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ ರಾಜೀವ್ ರವರು ಮಾತನಾಡಿ ಶಿಕ್ಷಣ ಸಂಸ್ಥೆಗೆ ಅವರ ಕೊಡುಗೆ ಅಪಾರ ಎಂದರು.
ಬಹಳ ದಿನಗಳಿಂದ ತಾತಯ್ಯ ಬಡಾವಣೆ ಮುಡಾ ವತಿಯಿಂದ ನಿರ್ಮಿಸಬೇಕೆನ್ನುವ ಮನವಿ ಇದೆ ಅದನ್ನು ಸರ್ಕಾರದ ಗಮನಕ್ಕೆ ತಂದು ಯೋಜನೆ ರೂಪಿಸಲಾಗುವುದು ಎಂದರು.
ಈ ಕಾರ್ಯಕ್ರಮದಲ್ಲಿ ಶಾಸಕ ಎಲ್. ನಾಗೇಂದ್ರ, ನಗರ ಪಾಲಿಕೆ ಸದಸ್ಯೆ ಪ್ರಮೀಳಾ ಭರತ್, ನಗರಪಾಲಿಕೆ ಮಾಜಿ ಸದಸ್ಯ ಎಂ.ಡಿ ಪಾರ್ಥಸಾರಥಿ, ಬ್ರಾಹ್ಮಣ ಮಂಡಳಿ ಸದಸ್ಯ ಎಂ.ಆರ್ ಬಲಕೃಷ್ಣ, ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷ ಹೆಚ್. ಎನ್ ಶ್ರೀಧರಮೂರ್ತಿ, ಯುವ ಮುಖಂಡರಾದ ಅಜಯ್ ಶಾಸ್ತ್ರಿ, ವಿಕ್ರಂ ಅಯ್ಯಂಗಾರ್, ರಾಕೇಶ್ ಭಟ್, ಕಡಕೊಳ ಜಗದೀಶ್, ಸುಚೀಂದ್ರ, ಚಕ್ರಪಾಣಿ, ಅರುಣ್, ಪ್ರಶಾಂತ್ ಇದ್ದರು.