ಮೈಸೂರು ವಿವಿ ಕೆಮಿಸ್ಟ್ರಿ ಪರೀಕ್ಷೆ ಅಕ್ರಮ: ಇಬ್ಬರ ಬಂಧನ

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ ಕೆಮಿಸ್ಟ್ರಿ ಪರೀಕ್ಷೆ ಅಕ್ರಮ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಮೈಸೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾದ ಚೇತನ್ ಮತ್ತು ಚಂದನ್ ಬಂಧಿತರು.
ಮೈಸೂರು ವಿಶ್ವವಿದ್ಯಾಲ ಏ. 15 ಮತ್ತು 17ರಂದು ನಡೆದ ಬಿಎಸ್ಸಿ ರಸಾಯನ ವಿಜ್ಞಾನದ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದರ ಹಿನ್ನೆಲೆಯಲ್ಲಿ ನಗರದ ಮಂಡಿ ಠಾಣೆ ಇನ್ಸಪೆಕ್ಟರ್ ನಾರಾಯಣ ಸ್ವಾಮಿ ಸೇರಿದಂತೆ 6 ಮಂದಿ ವಿರುದ್ಧ ಮಂಡಿ ಠಾಣೆಯಲ್ಲಿ ಎಫ್.ಐ.ಆರ್.ದಾಖಲಾಗಿತ್ತು.
ಈಗಾಗಲೇ ಈ ಪ್ರಕರಣ ಸಂಬಂಧ ಮಂಡಿ ಠಾಣೆ ಇನ್ಸಪೆಕ್ಟರ್ ನಾರಾಯಣ ಸ್ವಾಮಿ ಅವರನ್ನು ಅಮಾನತುಗೊಳಿಸಲಾಗಿದೆ.