ಮೈಸೂರು: ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ಅವರನ್ನು ವರ್ಗಾಯಿಸಲಾಗಿದೆ.
ಮೈಸೂರಿಗೆ ನೂತನ ಜಿಲ್ಲಾಧಿಕಾರಿಯಾಗಿ ಬಿ. ಶರತ್ ಅವರನ್ನು ಸರಕಾರ ನಿಯೋಜಿಸಿದೆ.
ಶರತ್ ಅವರು ಕಲಬುರಗಿಯ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು ಅವರು ಮೈಸೂರು ಜಿಲ್ಲಾಧಿಕಾರಿಯಾಗಿ ಸರಕಾರ ವರ್ಗಾವಣೆ ಮಾಡಿದೆ.
ಅಭಿರಾಮ್ ಜಿ. ಶಂಕರ್ ಅವರು ಇನ್ನು ಕೆಲ ದಿನಗಳಲ್ಲಿ ಕೇಂದ್ರ ಸರ್ಕಾರದ ಸೇವೆಗೆ ತೆರಳಲಿದ್ದಾರೆ. ಹಾಗಾಗಿ ಅವರನ್ನು ಸಧ್ಯಕ್ಕೆ ಮೈಸೂರಿನಲ್ಲಿರುವ ಎ.ಟಿ.ಐ.ಗೆ ವರ್ಗ ಮಾಡಲಾಗಿದೆ.
ಅಭಿರಾಂ ಜಿ. ಶಂಕರ್ ಅವರು ಕಳೆದ 2 ವರ್ಷಗಳಿಂದ ಮೈಸೂರು ಜಿಲ್ಲಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದರು.