ಮೈಸೂರು: ಮೈಸೂರು ರೈಲ್ವೆ ನಿಲ್ದಾಣದಲ್ಲಿ ಪ್ಲಾಟ್‍ಫಾರ್ಮ್ ಟಿಕೆಟ್ ದರವನ್ನು ಹೆಚ್ಚಿಸಲಾಗಿದೆ.
ಕೋವಿಡ್-19 ದೇಶದಲ್ಲಿ ಹೆಚ್ಚು ವೇಗವಾಗಿ ಹರಡುತ್ತಿರುವ ಕಾರಣ ಸಾರ್ವಜನಿಕರ ಹಿತವನ್ನು ಗಮನದಲ್ಲಿಟ್ಟುಕೊಂಡು ಮೈಸೂರು ನಿಲ್ದಾಣದಲ್ಲಿ ಪ್ಲಾಟ್‍ಫಾರ್ಮ್ ಟಿಕೆಟ್ ಶುಲ್ಕವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಇದೇ ಡಿ. 31ರವರೆಗೆ ರೂ. 50ಕ್ಕೆ ಹೆಚ್ಚಿಸಲಾಗಿದೆ ಎಂದು ನೈಋತ್ಯ ರೈಲ್ವೆಯ ಮೈಸೂರು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರಾದ ಪ್ರಿಯಾ ಶೆಟ್ಟಿ ಅವರು ತಿಳಿಸಿದ್ದಾರೆ.
ಪ್ಲಾಟ್‍ಫಾರ್ಮ್ ಟಿಕೆಟ್‍ನ ದರ ಹೆಚ್ಚಳವು ಸಾರ್ವಜನಿಕರ ವೃಥಾ ಪ್ಲಾಟ್‍ಫಾರ್ಮ್ ಪ್ರವೇಶವನ್ನು ನಿರ್ಬಂಧಿಸುವ ಉದ್ದೇಶವನ್ನು ಹೊಂದಿದೆ ಮತ್ತು ಇದರಿಂದಾಗಿ ಪ್ಲಾಟ್‍ಫಾರ್ಮ್‍ಗಳಲ್ಲಿ ಜನದಟ್ಟಣೆ ತಪ್ಪುತ್ತದೆ ಎಂದವರು ತಿಳಿಸಿದ್ದಾರೆ.
ಮೈಸೂರು ನಿಲ್ದಾಣದಿಂದ ಹೊರಡುವ ವಿಶೇಷ ರೈಲುಗಳ ಮಾಹಿತಿ:
- ರೈಲು ಸಂಖ್ಯೆ 06503/06504 ಕೆ.ಎಸ್.ಆರ್. ಬೆಂಗಳೂರು – ಮೈಸೂರು-ಕೆ.ಎಸ್.ಆರ್. ಬೆಂಗಳೂರು (ದೈನಂದಿನ) ವಿಶೇಷ ಎಕ್ಸ್‍ಪ್ರೆಸ್
- ರೈಲು ಸಂಖ್ಯೆ 06539/06540-ಕೆಎಸ್.ಆರ್. ಬೆಂಗಳೂರು – ಮೈಸೂರು-ಕೆ.ಎಸ್.ಆರ್. ಬೆಂಗಳೂರು (ದೈನಂದಿನ) ವಿಶೇಷ ಎಕ್ಸ್‍ಪ್ರೆಸ್
- ರೈಲು ಸಂಖ್ಯೆ 06535/06536 ಮೈಸೂರು – ಸೋಲಾಪುರ – ಮೈಸೂರು (ದೈನಂದಿನ) ವಿಶೇಷ ಎಕ್ಸ್‍ಪ್ರೆಸ್
- ರೈಲು ಸಂಖ್ಯೆ 06581/06582 ಹುಬ್ಬಳ್ಳಿ – ಮೈಸೂರು – ಹುಬ್ಬಳ್ಳಿ (ದೈನಂದಿನ) ವಿಶೇಷ ಎಕ್ಸ್‍ಪ್ರೆಸ್
- ರೈಲು ಸಂಖ್ಯೆ 02975/02976 ಮೈಸೂರು – ಜೈಪುರ – ಮೈಸೂರು (ವಾರದಲ್ಲಿ ಎರಡು ದಿನ) ಸೂಪರ್‍ಫಾಸ್ಟ್ ವಿಶೇಷ ಎಕ್ಸ್‍ಪ್ರೆಸ್
- ರೈಲು ಸಂಖ್ಯೆ 06517/06518 ಕೆ.ಎಸ್.ಆರ್. ಬೆಂಗಳೂರು – ಮಂಗಳೂರು ಕೇಂದ್ರ – ಕೆ.ಎಸ್.ಆರ್. ಬೆಂಗಳೂರು (ವಾರದಲ್ಲಿ ಮೂರು ದಿನ) ವಿಶೇಷ ಎಕ್ಸ್‍ಪ್ರೆಸ್