ನದಿ ಜೋಡಣೆ ವಿಚಾರದಲ್ಲಿ ನಮಗೆ ಅನ್ಯಾಯ ಆದರೆ ಒಪ್ಪುವುದಿಲ್ಲ -ಅಶೋಕ್

ಬೆಂಗಳೂರು: ನದಿ ಜೋಡಣೆ ವಿಚಾರದಲ್ಲಿ ನಮಗೆ ಅನ್ಯಾಯ ಆದರೆ ನಾವು ಒಪ್ಪುವುದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ನಮ್ಮ ರಾಜ್ಯದ ನೀರಿಗೆ ತೊಂದರೆ ಆಗಬಾರದು. ನೀರು ಹಂಚಿಕೆಯಲ್ಲಿ ಸಮಸ್ಯೆಯಾದರೆ ನಾವು ಅನುಮತಿ ಕೊಡುವುದಿಲ್ಲ. ರಾಜ್ಯ ಸರ್ಕಾರದ ಅನುಮತಿ ಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ. ನಮಗೆ ಅನ್ಯಾಯ ಆಗೋ ಹಾಗಿದ್ದರೆ ನಾವು ಒಪ್ಪುವುದಿಲ್ಲ ಎಂದರು‌.

ಕೇಂದ್ರ  ಸರ್ಕಾರದ ಬಜೆಟ್ ಪ್ರಗತಿಪರವಾಗಿದೆ.ಹಳ್ಳಿಗಳಲ್ಲಿ ಆಪ್ಟಿಕಲ್ ಫೈಬರ್ ಹಾಕಲಾಗುತ್ತಿದೆ. ಡಿಜಿಟಲ್ ಮುಖಾಂತರ ಶಿಕ್ಷಣ ಕೊಡಲು ತೀರ್ಮಾನ ಮಾಡಿದ್ದಾರೆ. ಎಸಿ ಎಸ್ಟಿ ರೈತರಿಗೆ ವಿಶೇಷ ಯೋಜನೆ ಘೋಷಣೆ ಮಾಡಿದ್ದಾರೆ.

ದೂರದೃಷ್ಟಿಯಿಂದ ಯೋಜನೆ ಜಾರಿ ಮಾಡಲಾಗುತ್ತಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಜೆಟ್ ಮಂಡನೆ ಮುನ್ನವೇ ಇದೊಂದು ನಿರಾಶದಾಯಕ ಬಜೆಟ್ ಅಂತ ಹೇಳುತ್ತಿದ್ದರು. ಬಜೆಟ್ ಮಂಡನೆ ಮಾಡಿ ಅವರಿಗೆ ಅನುಭವ ಇಲ್ಲ.ಹೀಗಾಗಿ ಆ ರೀತಿ ಮಾತನಾಡುತ್ತಿದ್ದಾರೆ ಎಂದು ಅಶೋಕ್  ಟೀಕಿಸಿದರು.