ನಕಲಿ ನಂಬರ್ ಪ್ಲೇಟ್ ಹೊಂದಿದ್ದೀರಾ ಹುಷಾರ್! ಬಂದಿದೆ ಹೈಟೆಕ್ ಕ್ಯಾಮೆರಾ

ಬೆಂಗಳೂರು:ನಕಲಿ ನಂಬರ್ ಪ್ಲೇಟ್ ಹಾಕ್ಕೊಂಡ್ ಯಾರನ್ನಾದರೂ ಯಾಮಾರಿಸ ಬಹುದು ಅಂದು ಕೊಂಡಿದೀರಾ.ಹಾಗಾದರೆ  ಇನ್ನು ಮುಂದೆ ಎಚ್ಚರದಿಂದ ಇರಿ.

ಪೊಲೀಸ್ ಇಲಾಖೆ ಬೆಂಗಳೂರಿನಲ್ಲಿ ನಕಲಿ ನಂಬರ್ ಪ್ಲೇಟ್ ಹಾಕಿಕೊಂಡು ಯಾಮಾರಿಸುತ್ತಿದ್ದವರಿಗೆ ಬಿಗ್ ಶಾಕ್   ನೀಡಿದೆ.

ನಕಲಿ ನಂಬರ್ ಪ್ಲೇಟ್ ಪತ್ತೆಗೆ ಟ್ರಾಫಿಕ್ ಪೊಲೀಸರು ಹೈಟೆಕ್ ಕ್ಯಾಮೆರಾ ಬಳಸುತ್ತಿದ್ದಾರೆ.

ಈ ಬಗ್ಗೆ ಟ್ರಾಫಿಕ್ ಪೊಲೀಸರ್ ಕಮಿಷನರ್ ರವಿಕಾಂತೇಗೌಡ ಮಾಹಿತಿ ನೀಡಿದ್ದು, ರಾಜ್ಯದಲ್ಲೇ ಮೊದಲ ಬಾರಿಗೆ ANPR (automatic number plate recognition) ಕ್ಯಾಮರಾ ಬಳಕೆ ಮಾಡಲಾಗುತ್ತಿದೆ ಎಂದಿದ್ದಾರೆ.

ಈ ಕ್ಯಾಮೆರಾ ಹದ್ದಿನ ಕಣ್ಣಿಡಲಿದ್ದು, ರಸ್ತೆಯಲ್ಲಿ ಸಂಚರಿಸುವ ನಕಲಿ ನಂಬರ್ ಪ್ಲೇಟ್ ವಾಹನ ಪತ್ತೆ ಮಾಡಲಿದೆ.

ಈ ಕ್ಯಾಮೆರಾ ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದ ವಾಹನಗಳನ್ನೂ ಪತ್ತೆ ಮಾಡಲಿದ್ದು, ವಾಹನಗಳ ರಿಜಿಸ್ಟ್ರೇಷನ್ ನಂಬರ್ ಕ್ಯಾಮೆರಾದಲ್ಲಿ ರೀಡ್ ಮಾಡಲಾಗುತ್ತದೆ.

ಕ್ಯಾಮೆರಾ ನಕಲಿ ಪ್ಲೇಟ್  ಪತ್ತೆ ಮಾಡುತ್ತಿದ್ದಂತೆ ಸಿಗ್ನಲ್ ನಲ್ಲಿರೋ ಪೊಲೀಸರಿಗೆ ಬೈಕ್, ಕಾರ್ ನಂಬರ್ ಸಮೇತ  ಮೇಸೆಜ್ ಬರಲಿದೆ ಎಂದು ಅವರು ತಿಳಿಸಿದ್ದಾರೆ.