ಬೆಂಗಳೂರು : ಚಿನ್ನಾರಿ ಮುತ್ತ ಖ್ಯಾತಿಯ ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನ ನಿಧನರಾಗಿದ್ದಾರೆ.
ಬ್ಯಾಂಕಾಕ್ ಪ್ರವಾಸಕ್ಕೆ ತೆರಳಿದ್ದ ವೇಳೆ ಸ್ಪಂದನ ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು.
ಲೋ ಬಿಪಿಯಿಂದ ಕುಸಿದು ಬಿದ್ದ ಸ್ಪಂದನ ಅವರನ್ನು ಕೂಡಲೆ ಬ್ಯಾಂಕಾಕ್ ನಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಲೋ ಬಿಪಿ ತರುವಾಯ ಹೃದಯಾಘಾತವಾಗಿ ಸ್ಪಂದನ ಸಾವನ್ನಪ್ಪಿದ್ದಾರೆ.
ವಿಜಯ ರಾಘವೇಂದ್ರ ಹಾಗೂ ಸ್ಪಂದನ ದಂಪತಿಗೆ ಶೌರ್ಯ ಪುತ್ರ ಇದ್ದಾನೆ.
ಸ್ಪಂದನ ಅವರ ಪಾರ್ಥಿವ ಶರೀರವನ್ನು ನಾಳೆ ಬೆಂಗಳೂರಿಗೆ ತರಲಾಗುವುದು. ವಿಜಯ ರಾಘವೇಂದ್ರ ಅವರು ಪಾರ್ವತಮ್ಮ ರಾಜ್ ಕುಮಾರ್ ತಮ್ಮನ ಮಗನಾಗಿದ್ದು, ಅಪ್ಪು ನಿಧನದ ಬಳಿಕ ಸ್ಪಂದನ ಸಾವು ಡಾ.ರಾಜ್ ಕುಮಾರ್ ಕುಟುಂಬಕ್ಕೆ ಮತ್ತೊಂದು ಆಘಾತವಾಗಿದೆ.
ಸ್ಪಂದನ ನಿವೃತ್ತ ಎಸಿಪಿ ಬಿ.ಕೆ.ಶಿವರಾಮ್ ಅವರ ಪುತ್ರಿ.