ನಕ್ಷತ್ರ ಆಮೆ ಮಾರಾಟಕ್ಕೆ ಯತ್ನ: ಮೂವರ ಬಂಧನ

ಮಡಿಕೇರಿ: ಅಪರೂಪದ ನಕ್ಷತ್ರ ಆಮೆಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಕನಕಪುರ ವಾಸಿ ಎಂ.ರಾಮಮೂರ್ತಿ (20), ಚನ್ನಪಟ್ಟಣದ ವಿ.ಕೆ. ರಮೇಶ್ (31) ಹಾಗೂ ಕೆ.ಆರ್. ನಗರ ತಾಲೂಕು ಭೇರ್ಯ ಗ್ರಾಮದ ಬಿ.ಎನ್. ಯೋಗೇಶ್ (20) ಬಂಧಿತರು.
ಬಂಧಿತರಿಂದ 2 ಜೀವಂತ ನಕ್ಷತ್ರ ಆಮೆ ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು 2 ನಕ್ಷತ್ರ ಆಮೆಗಳನ್ನು ಫೆ. 24ರಂದು ವಿರಾಜಪೇಟೆ ತಾಲೂಕಿನ ಚೆನ್ನಂಗೊಲ್ಲಿಯ ಬಸ್ ನಿಲ್ದಾಣ ಬಳಿ 50 ಲಕ್ಷ ರೂ.ಗಳಿಗೆ ಮಾರಾಟ ಮಾಡಲು ಬಂದಾಗ ವಿರಾಜಪೇಟೆ ಸಿಐಡಿ ಪೆÇಲೀಸ್ ಅರಣ್ಯ ಸಂಚಾರ ದಳದವರು ಬಂಧಿಸಿದ್ದಾರೆ.
ಮಡಿಕೇರಿ ಸಿಐಡಿ ಪೆÇಲೀಸ್ ಫಾರೆಸ್ಟ್ ಸೆಲ್ ನ ಎಸ್.ಪಿ. ಸುರೇಶ್ ಬಾಬು ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸಪೆಕ್ಟರ್ ವೀಣಾ ನಾಯಕ್, ಸಿಬ್ಬಂದಿಗಳಾದ ಕೆ.ಬಿ. ಸೋಮಣ್ಣ, ಟಿ.ಪಿ. ಮಂಜುನಾಥ್, ಪಿ.ಬಿ. ಮೊಣ್ಣಪ್ಪ, ಎಂ.ಬಿ. ಗಣೇಶ್, ಎಸ್.ಎಂ. ಯೋಗೇಶ್ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.