ನವರಾತ್ರಿಯಲ್ಲಿ ದುರ್ಗಾ ದೇವಿ ಆರಾಧನೆ

ಡಾ. ಗುರುಪ್ರಸಾದ ಎಚ್. ಎಸ್.
ಲೇಖಕರು ಮತ್ತು ಉಪನ್ಯಾಸಕರು
dr.guruhs@gmail.com
ಈ ವರ್ಷದ ನವರಾತ್ರಿ ಅಕ್ಟೋಬರ್ 7 ರಿಂದ ಶುರುವಾಗಲಿದೆ.

ಈ ಸಂದರ್ಭದಲ್ಲಿ, ದುರ್ಗಾ ದೇವಿಯನ್ನು ಪೂಜಿಸಲಾಗುತ್ತದೆ; ಅವಳು ಶಕ್ತಿಯ ಸಂಕೇತ. ನವರಾತ್ರಿ ಎಂದರೆ “ಒಂಬತ್ತು ರಾತ್ರಿಗಳು.ಅಕ್ಟೋಬರ್ 15 ರವರೆಗೆ ನಡೆಯಲಿದೆ.

ನವರಾತ್ರಿ : ಶ್ರೀರಾಮನು ರಾಕ್ಷಸ ರಾಜ ರಾವಣನೊಡನೆ ಯುದ್ಧ ಮಾಡಲು ಹೊರಡುವ ಮೊದಲು ದುರ್ಗಾ ಪೂಜೆಯನ್ನು ಪ್ರಾರಂಭಿಸಿದನು.

ದುರ್ಗಾ ಮಾತೆಯ ಅವತಾರದ ಹಿಂದಿರುವ ಕುತೂಹಲಕಾರಿ ಕಥೆ ಶ್ರೀರಾಮನು ಲಂಕೆಯ ಮೇಲೆ ಯುದ್ಧ ಮಾಡಲು ಹೊರಡುವ ಮುನ್ನ ದೇವಿಯ ಆಶೀರ್ವಾದ ಪಡೆಯಲು ಇಚ್ಛಿಸಿದನು. ಅದಕ್ಕಾಗಿ ಅವನು ಆರು ತಿಂಗಳು ಕಾಯುವುದಕ್ಕೆ ಇಷ್ಟಪಡಲಿಲ್ಲ. ಆದ್ದರಿಂದ ಅವನು ತಪ್ಪಾದ ಮಾಸದಲ್ಲಿ ದುರ್ಗಾ ದೇವಿ ಪೂಜೆ ಕೈಕೊಂಡನು. ಆದ್ದರಿಂದಲೇ ಅವನು ದುರ್ಗಾಪೂಜೆಯನ್ನು ಮಾಡಿದ ಮಾಸವನ್ನು ‘ಅಕಾಲ್ ಬೋಧಾನ್’ ಅಥವಾ ತಪ್ಪು ಮಾಸದಲ್ಲಿ ಮಾಡಿದ ಪೂಜೆ ಎಂದು ಹೇಳಲಾಗುತ್ತದೆ.

ಅವನು ಪೂಜೆಯನ್ನು ಆಚರಿಸಲು ದುರ್ಗಾದೇವಿಗೆ 108 ಕಮಲ ಹೂವುಗಳನ್ನು ಅರ್ಪಿಸಿ 108 ದೀಪಗಳನ್ನು ಹಚ್ಚಿದನು. ಶ್ರೀರಾಮನು ಪೂಜೆ ಮಾಡುವ ಸಮಯದಲ್ಲಿ ರಾಕ್ಷಸನೊಬ್ಬನು ಒಂದು ಕಮಲವನ್ನು ಕದ್ದುಬಿಟ್ಟನು. ಆದ್ದರಿಂದ ಪೂಜೆಯನ್ನು ಸಂಪೂರ್ಣಗೊಳಿಸಲು ಶ್ರೀರಾಮನು ಕಮಲದ ಬದಲಿಗೆ ತನ್ನ ಎರಡು ಕಣ್ಣುಗಳಲ್ಲಿ ಒಂದು ಕಣ್ಣನ್ನು ಅರ್ಪಿಸಲು ಸಿದ್ಧನಾದನು. ಆದರೆ ಅವನು ಹಾಗೆ ಮಾಡುವ ಮೊದಲೇ ದೇವಿಯು ಶ್ರೀರಾಮನ ಮುಂದೆ ಪ್ರತ್ಯಕ್ಷ್ಯಳಾಗಿ ಅವನು ಯುದ್ಧದಲ್ಲಿ ವಿಜಯಶಾಲಿಯಾಗಲೆಂದು ಹರಸಿದಳು.

ದುರ್ಗಾ ಪೂಜೆಯ ಮಹತ್ವವನ್ನು ಸಾರುವ 9 ಆಚರಣೆಗಳು ನವರಾತ್ರಿಯ ಹತ್ತನೇ ದಿವಸ ಶ್ರೀರಾಮನು ರಾವಣನನ್ನು ಸಂಹರಿಸಿದನು. ಈಗಲೂ ಕೂಡ ದಸರಾ ಹಬ್ಬದ ಹತ್ತನೆಯ ದಿವಸ ಶ್ರೀರಾಮನ ಐತಿಹಾಸಿಕ ವಿಜಯವನ್ನು ಆಚರಿಸಲು ರಾವಣನ ವಿಗ್ರಹವನ್ನು ಸೃಷ್ಟಿಸಿ ಸುಡುತ್ತಾರೆ.

ನವರಾತ್ರಿ ಹಿನ್ನೆಲೆ: ನವರಾತ್ರಿಯ ಬಗ್ಗೆ ಹಲವಾರು ಪುರಾಣ ಕಥೆಗಳಿವೆ. ಅವುಗಳ ಬಗ್ಗೆ ಇಲ್ಲಿದೆ ಮಾಹಿತಿ.

ಪುರಾಣಗಳ ಪ್ರಕಾರ, ಬ್ರಹ್ಮದೇವನು ರಾಕ್ಷಸ ರಾಜ ಮಹಿಷಾಸುರನಿಗೆ ಅಮರತ್ವವನ್ನು ವಾಗ್ದಾನ ಮಾಡಿದನು. ಅಂದರೆ ಕೇವಲ ಒಬ್ಬ ಮಹಿಳೆಯಿಂದ ಮಾತ್ರ ಅವನನ್ನು ಸೋಲಿಸಲು ಅಥವಾ ಸಂಹಾರ ಮಾಡಲು ಸಾಧ್ಯ ಎಂದು ವರ ನೀಡಲಾಗಿತ್ತು.

ಯಾವ ಹೆಣ್ಣು ತನ್ನನ್ನು ಕೊಲ್ಲಲು ಸಾಧ್ಯವೇ ಇಲ್ಲ ಎಂಬ ಭ್ರಮೆಯಲ್ಲಿದ್ದ ಮಹಿಷಾಸುರನು ತ್ರಿಲೋಕಗಳ ಮೇಲೆ ದಾಳಿ ಮಾಡುವುದನ್ನು ತಡೆಯಲು ಯಾರಿಗೂ ಸಾಧ್ಯವಾಗಲಿಲ್ಲ, ಅವುಗಳೆಂದರೆ ಭೂಮಿ, ಸ್ವರ್ಗ ಮತ್ತು ನರಕ.

ಆಗ ಭಗವಾನ್ ಬ್ರಹ್ಮ, ಭಗವಾನ್ ವಿಷ್ಣು ಮತ್ತು ಶಿವನ ಶಕ್ತಿಗಳು ಸೇರಿ ದುರ್ಗಾ ದೇವಿಯಾಗಿ ಅವತರಿಸದರು ಎನ್ನಲಾಗಿದೆ.

ಇದರ ಪರಿಣಾಮವಾಗಿ ಮಹಿಷಾಸುರ ಮತ್ತು ದೇವಿ ದುರ್ಗಾ ನಡುವೆ 15 ದಿನಗಳ ಕಾಲ ನಡೆದ ಯುದ್ಧದ ಸಮಯದಲ್ಲಿ ರಾಕ್ಷಸ ರಾಜನು ದೇವಿಯನ್ನು ದಾರಿ ತಪ್ಪಿಸಲು ತನ್ನ ಆಕಾರವನ್ನು ಬದಲಾಯಿಸಿದನು. ಆತ ಮಹಿಷನಾಗಿ ಬದಲಾದನು ಎನ್ನಲಾಗಿದೆ. ಯುದ್ದದಲ್ಲಿ ದುರ್ಗಾ ದೇವಿಯು ತನ್ನ ತ್ರಿಶೂಲದಿಂದ ಅವನನ್ನು ಕೊಲ್ಲುತ್ತಾಳೆ. ಮಹಾಲಯದ ದಿನ ಮಹಿಷಾಸುರನನ್ನು ಕೊಲ್ಲಲಾಯಿತು.

ನವರಾತ್ರಿ ರಾಮಾಯಣಕ್ಕೂ ಒಂದು ಸಂಬಂಧವಿದೆ ಎಂದು ಪುರಾಣಗಳು ಹೇಳುತ್ತವೆ. ರಾವಣನೆಂಬ ಬಲಶಾಲಿ ರಾಕ್ಷಸನನ್ನು ವಧೆ ಮಾಡಲು ರಾಮನು ಒಂಬತ್ತು ದಿನಗಳ ಕಾಲ ದುರ್ಗೆಯ ಪೂಜೆ ಮಾಡಿ ಆಕೆಯಿಂದ ಶಕ್ತಿ ಹಾಗೂ ಬಲ ಪಡೆದ ಎನ್ನಲಾಗುತ್ತದೆ.

ಸೀತೆಯನ್ನು ಅಪಹರಿಸಿದ್ದ ರಾವಣನನ್ನು ಇದರ ಬಳಿಕ ರಾಮ ವಧಿಸಿದ. ಒಂಬತ್ತು ದಿನ ಕಾಲ ನವರಾತ್ರಿ ಎಂದು ಕರೆಯಲಾಗುವುದು ಮತ್ತು ರಾಮನು ರಾವಣನನ್ನು ಅಂತಿಮ ದಿನ ವಧಿಸಿದ. ಈ ದಿನವನ್ನು ದಸರಾ ಅಥವಾ ವಿಜಯದಶಮಿ ಎಂದು ಕರೆಯಲಾಗುತ್ತದೆ. ಇದು ರಾವಣನಂತಹ ದುಷ್ಟ ರಾಕ್ಷಸನ ಮೇಲೆ ರಾಮನ ಗೆಲುವನ್ನು ತೋರಿಸುತ್ತದೆ ಎಂದು ಸಹ ಹೇಳಲಾಗುತ್ತದೆ.

ನವರಾತ್ರಿ ಒಂದು ಹಿಂದೂ ಹಬ್ಬವಾಗಿದ್ದು, ರಾಕ್ಷಸ ರಾಜ ಮಹಿಷಾಸುರನನ್ನು ಗೆದ್ದ ದುರ್ಗಾ ದೇವಿಯನ್ನು ಈ ಹಬ್ಬದಲ್ಲಿ ಸ್ಮರಿಸಲಾಗುತ್ತದೆ.

ಈ ಬಾರಿ ನವರಾತ್ರಿಯು ಅ. 7 ರಂದು ಗುರುವಾರದಿಂದ ಆರಂಭವಾಗುತ್ತಿದೆ. ಶ್ರಾದ್ಧವು ಅ. 6ರಂದು ಸರ್ವಪಿತ್ರಿ ಅಮಾವಾಸ್ಯೆಯೊಂದಿಗೆ ಕೊನೆಗೊಳ್ಳುತ್ತದೆ.

ಮರುದಿನ ಅಂದರೆ 2021ರ 7ನೇ ಅಕ್ಟೋಬರ್ ನಲ್ಲಿ ಗುರುವಾರದಿಂದ ನವರಾತ್ರಿ ಆರಂಭವಾಗುತ್ತದೆ. ಒಂದೇ ದಿನ ಎರಡು ದಿನಾಂಕಗಳು ಬೀಳುವುದರಿಂದ ಶಾರದಿಯಾ ನವರಾತ್ರಿ 8 ದಿನಗಳವರೆಗೆ ಇರುತ್ತದೆ ಎಂದು ಹೇಳಲಾಗುತ್ತಿದೆ.

ಅ. 9ರ ಶನಿವಾರ, ತೃತೀಯಾ ಬೆಳಿಗ್ಗೆ 7.48 ರವರೆಗೆ ಇರುತ್ತದೆ, ಚತುರ್ಥಿ ಆರಂಭವಾಗುತ್ತದೆ, ಇದು ಮರುದಿನ ಅಕ್ಟೋಬರ್ 10, ಭಾನುವಾರ ಬೆಳಿಗ್ಗೆ 5 ರವರೆಗೆ ಇರುತ್ತದೆ.

ಈ ಬಾರಿ ಮಾತೃ ದೇವಿಯ ಆರಾಧನೆಯು ಗುರುವಾರದಿಂದ ಆರಂಭವಾಗುತ್ತಿದೆ, ಇದು ಪೂಜೆ ಮತ್ತು ಆಧ್ಯಾತ್ಮಿಕ ಪ್ರಗತಿಗೆ ಮಂಗಳಕರವಾಗಿದೆ ಎನ್ನುವ ನಂಬಿಕೆಯಿದೆ. ಚಿತ್ರ ನಕ್ಷತ್ರದಲ್ಲಿ ನವರಾತ್ರಿ ಆರಂಭವಾಗುತ್ತಿದೆ, ಇದರಿಂದ ಸಾಧನಾ, ಧೈರ್ಯ ಮತ್ತು ನೆಮ್ಮದಿ ಸಿಗುತ್ತದೆ ಎಂದು ಹೇಳಲಾಗುತ್ತದೆ.
ನವರಾತ್ರಿ ದಿನಾಂಕಗಳು
ಮೊದಲ ದಿನ 2021ರ ಅಕ್ಟೋಬರ್ 7: ಮಾ ಶೈಲಪುತ್ರಿಯ ಆರಾಧನೆ
ಎರಡನೇ ದಿನ 2021ರ ಅಕ್ಟೋಬರ್ 8: ತಾಯಿ ಬ್ರಹ್ಮಚಾರಿಣಿಯ ಆರಾಧನೆ
ಮೂರನೇ ದಿನ 2021ರ ಅಕ್ಟೋಬರ್ 9: ತಾಯಿ ಚಂದ್ರಘಂಟ ಮತ್ತು ತಾಯಿ ಕೂಷ್ಮಾಂಡರ ಪೂಜೆ
ನಾಲ್ಕನೇ ದಿನ 2021ರ ಅಕ್ಟೋಬರ್ 10: ತಾಯಿ ಸ್ಕಂದಮಾತೆಯ ಆರಾಧನೆ
ಐದನೇ ದಿನ 2021ರ ಅಕ್ಟೋಬರ್ 11: ತಾಯಿ ಕಾತ್ಯಾಯನಿಯ ಆರಾಧನೆ
ಆರನೇ ದಿನ 2021ರ ಅಕ್ಟೋಬರ್ 12: ತಾಯಿ ಕಾಳರಾತ್ರಿಯ ಪೂಜೆ
ಏಳನೇ ದಿನ 2021ರ ಅಕ್ಟೋಬರ್ 13: ತಾಯಿ ಮಹಾಗೌರಿಯ ಆರಾಧನೆ
ಎಂಟನೇ ದಿನ 2021ರ ಅಕ್ಟೋಬರ್ 14: ತಾಯಿ ಸಿದ್ಧಿದಾತ್ರಿಯ ಆರಾಧನೆ
2021ರ ಅಕ್ಟೋಬರ್ 15: ವಿಜಯದಶಮಿ (ದಸರಾ)
ಘಟಸ್ಥಾಪನಕ್ಕಾಗಿ ಶುಭ ಮುಹೂರ್ತ (ಶಾರದಿಯಾ ನವರಾತ್ರಿ 2021 ಘಟಸ್ಥಾಪನ ಶುಭ ಮುಹೂರ್ತ)
ನವರಾತ್ರಿಯ ಮೊದಲ ದಿನ, ಮಾತೃ ದೇವಿಯ ಆರಾಧನೆಯನ್ನು ಘಟಸ್ಥಾಪನದೊಂದಿಗೆ ಆರಂಭಿಸಲಾಗುತ್ತದೆ. ಘಟಸ್ಥಾಪನಕ್ಕೆ ಶುಭ ಸಮಯವನ್ನು ವಿಶೇಷವಾಗಿ ನೋಡಿ ಘಟಸ್ಥಾಪನ ಮಾಡುವುದರಿಂದ ನವರಾತ್ರಿ ಫಲಪ್ರದವಾಗುತ್ತದೆ.

ಈ ಬಾರಿ ನವರಾತ್ರಿಯನ್ನು ಕೇವಲ 8 ದಿನಗಳ ಕಾಲ ಮಾತ್ರ ಆಚರಿಸುವುದೇ ವಿಶೇಷವಾಗಿದೆ. ಸಾಮಾನ್ಯವಾಗಿ ಪ್ರತೀ ವರ್ಷ 9 ದಿನಗಳ ಕಾಲ ನವರಾತ್ರಿಯನ್ನು ಆಚರಿಸಲಾಗುತ್ತಿತ್ತು. ಹಾಗೂ ಈ ಬಾರಿ ದೇವಿಯ ಘಟಸ್ಥಾಪನೆಯ ಮುಹೂರ್ತವು ಶುಭದಾಯಕವಾಗಿದೆ.