ನೆಪಮಾತ್ರಕ್ಕೆ ಓಓಡಿ ರದ್ದು…! ಹಿರಿಯ ಅಧಿಕಾರಿಗಳ ಕಣ್ಣಿಗೆ ಮಣ್ಣೆರಚೋ ಭೂಪರು

ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಜಿಲ್ಲೆಗೆ ಹೊಸ ಅಧೀಕ್ಷಕರು ಬಂದ ಕೂಡಲೇ ಓಓಡಿ ರದ್ದು ಮಾಡಿದರು.
ಆದರೆ ಅದೆಷ್ಟು ಘಟಕಗಳಲ್ಲಿ ಯಥಾ ಸ್ಥಿತಿ ಕಾಯ್ದುಕೊಂಡರೋ ಗೊತ್ತಿಲ್ಲ ಕುಂಟುನೆಪವೊಡ್ಡಿ ಅಲ್ಲಲ್ಲಿ ಉಳಿದಿದ್ದಾರೆ. ಚಾಮರಾಜನಗರ ವಿವಿಧ ಘಟಕಗಳಲ್ಲಿ ಓಓಡಿ ಯಿಂದ ಬಹುತೇಕ ಠಾಣೆಯಲ್ಲಿ ಸಿಬ್ಬಂದಿ ಕೊರತೆ ಕಂಡು ಬಂದಿದೆ.
ಇದನ್ನರಿತ ಹಿರಿಯ ಅಧಿಕಾರಿಗಳು ಸರ್ಜರಿ ಮಾಡುವಂತೆ ಸೂಚಿಸಿದ್ದರು ಎನ್ನಲಾಗಿದೆ.
ಅದರಂತೆ ಚಾಮರಾಜನಗರದಲ್ಲಿ ಆದೇಶ ಹೊರಡಿಸಲಾಯಿತು.
ಕೆಲವರು ರಾಜಕೀಯ ಪ್ರಭಾವದಿಂದ ಉಳಿದುಕೊಂಡರು.
ಈ ಓಓಡಿ ನೀತಿಯಿಂದ ಇಲಾಖೆಯಲ್ಲಿನ ವಸತಿ ನಿಲಯಗಳು ಎರಡೆರಡು ಇಟ್ಟು ಕೊಂಡಿರುವ ಅಂಶವೂ ಬೆಳಕಿಗೆ ಬರದೆ ಇರದು.
ಆದರೆ ಕೆಲವರು ವಸತಿ ನಿಲಯದಲ್ಲಿ ತಕರಾರು ಮತ್ತು ಮೂಗರ್ಜಿಗಳು ಐಜಿ ಅವರ ಕಚೇರಿ ತಲುಪಿದಾಗ ತಪಾಸಣೆ ಆಗುವ ವರೆಗೆ ಅಲ್ಲಿಯವರೆಗು ಯಾರೂ ಕೂಡ ಕೆಮ್ಮುವುದಿಲ್ಲ.
ಕೆಲವು ತಾಲ್ಲೂಕಿನಲ್ಲಂತು ಪೆÇಲೀಸರ ಸಮಕ್ಷಮದಲ್ಲೆ ಅಕ್ರಮ ಚಟುವಟಿಕೆಗಳಿಗೆ ದಾರಿ ಮಾಡಿಕೊಂಡಿದ್ದಾರೆ.
ಒಟ್ಟಾರೆ ದಕ್ಷಿಣ ಪೆÇಲೀಸ್ ಮಹಾನಿರ್ದೇಶಕರು ಸೂಕ್ತ ಮಾರ್ಗದರ್ಶನ ನೀಡೋದರ ಜೊತೆಗೆ ಖಡಕ್ ಸಂದೇಶ ಕೂಡ ರವಾನಿಸಬೇಕಾಗಿದೆ. ಇಲ್ಲವಾದರೆ ಶಿಸ್ತಿನ ಇಲಾಖೆಯಲ್ಲಿ ಅಶಿಸ್ತು ನಾಟ್ಯವಾಡಲಾರಂಭಿಸುತ್ತದೆ.