ಯಾದಗಿರಿ: ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಶ್ರಮ ಯುವಕರಿಗೆ ಮಾರ್ಗ ದರ್ಶನವಾಗಲಿ ಎಂದು ರಾಜ್ಯ ಆರೋಗ್ಯ ಖಾತೆ ಸಚಿವ ಬಿ. ಶ್ರೀರಾಮುಲು ಹೇಳಿದರು.
ಕಲ್ಯಾಣ ಕರ್ನಾಟಕ ಉತ್ಸವ ಸಮಿತಿ ಜಿಲ್ಲಾ ಘಟಕ ನಗರದ ಹೊಸಳ್ಳಿ ಕ್ರಾಸ್ ತಿರುವು ರಸ್ತೆಗೆ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತ ಎಂದು ನಾಮಕರಣ ಮಾಡಿರುವುದನ್ನು ಸಚಿವ ಬಿ. ಶ್ರೀರಾಮುಲು ಗುರುವಾರ ಉದ್ಘಾಟಿಸಿ ನಂತರ ಮಾತನಾಡಿದರು.
ದೇಶದ ಐಕ್ಯತೆ ಹಾಗೂ ಏಕಿಕರಣಕ್ಕಾಗಿ ಪಟೇಲರು ಪಟ್ಟಿರುವ ಶ್ರಮ ನಮ್ಮ ಯುವಕರಿಗೆ ಮಾರ್ಗದರ್ಶನವಾಗಲಿ ಎಂದರು.
ಶಾಸಕ ವೆಂಕಟರೆಡ್ಡಿ ಮುದ್ನಾಳ, ಜಿ.ಪಂ ಅಧ್ಯಕ್ಷ ಬಸಣ್ಣಗೌಡ ಪಾಟೀಲ್ ಯಡಿಯಾಪೂರ, ರಾಜ್ಯ ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿ ಚಂದ್ರಶೇಖರಗೌಡ ಮಾಗನೂರ, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷ ಲಲಿತಾ ಅನಪೂರ, ಸೇರಿದಂತೆ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.