ಬೆಳಗಾವಿ:ರಾಜ್ಯದಲ್ಲಿ ಮೊದಲು ಪರ್ಸೆಂಟೇಜ್ ಪ್ರಾರಂಭಿಸಿದ್ದು ಕಾಂಗ್ರೆಸ್ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆರೋಪಿಸಿದ್ದಾರೆ.
ಬೆಳಗಾವಿಯಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
ಪರ್ಸೆಂಟೇಜ್ ಕುರಿತು ಕಾಂಗ್ರೆಸ್ ನವರಿಗೆ ಪ್ರತಿಭಟನೆ ಮಾಡಲು ಯಾವುದೇ ನೈತಿಕತೆ ಇಲ್ಲ. ಏಕೆಂದರೆ ಪರ್ಸೆಂಟೇಜ್ ತಂದವರೇ ಅವರು ಎಂದು ಟೀಕಿಸಿದರು.
ಯಾವ ಇಂಜಿನಿಯರ್ ಮನೆಯಲ್ಲಿ ಕೋಟಿ, ಕೋಟಿ ಹಣ ಪತ್ತೆಯಾಗಿತ್ತಲ್ಲ, ಆ ಇಂಜಿನಿಯರ್ ಗಳು ಕಾಂಗ್ರೆಸ್ ನವರಿಗೆ ಪರಮಾಪ್ತರು. ಇದೆಲ್ಲ ಜನರಿಗೆ ತಿಳಿದಿದೆ ಎಂದರು.
ಅಂದು ಇಂಜಿನಿಯರ್ ಮನೆಯಲ್ಲಿ ಪತ್ತೆಯಾದ ಹಣ ಯಾರದ್ದು? ಅದೇನು ದಾನ, ಧರ್ಮದ ಹಣವೆ ಎಂದು ಸಿಟಿ ರವಿ ಪ್ರಶ್ನಿಸಿದರು.
ಬಿಜೆಪಿ ಸಕಾರದಲ್ಲಿ ಪರ್ಸೆಂಟೇಜ್ ಇಲ್ಲವೆಂದು ಅಲ್ಲಗಳೆಯುತ್ತಿಲ್ಲ. ತಪ್ಪು ಯಾರು ಮಾಡಿದರು ಅದು ತಪ್ಪೇ. ಉಪ್ಪು ತಿಂದವನು ನೀರು ಕುಡಿಯಲೇಬೇಕು ಎಂದು ಹೇಳೀದರು.
ಕಾಂಗ್ರೆಸ್ ಅಧ್ಯಕ್ಷರ ಮೇಲೆ ಭ್ರಷ್ಟಾಚಾರದ ಆರೋಪ ಇದೆ. ಇಡಿ ತನಿಖೆಯು ಆಗಿಹೋಗಿದೆ, ಈಗಾಗಲೆ ಆಂತರಿಕ ತನಿಖೆ ಮಾಡಿಸಲಾಗುತ್ತಿದೆ ಎಂದು ಸಿ.ಟಿ.ರವಿ ಹೇಳಿದರು.
ಇಷ್ಟೆಲ್ಲ ಇಟ್ಟುಕೊಂಡು ಕಾಂಗ್ರೆಸ್ ನವರಿಗೆ ಪರ್ಸೆಂಟೇಜ್ ಬಗ್ಗೆ ಪ್ರತಿಭಟನೆ ಮಾಡುವ ನೈತಿಕತೆ ಇದೆಯೇ ಎಂದು ಅವರು ಪ್ರಶ್ನಿಸಿದರು.