ಮೈಸೂರು : ಖಾಸಗಿ ಚಾನಲ್ ನ ಕ್ಯಾಮರ್ ಮನ್ ಮೇಲೆ ಹಲ್ಲೆ ನಡೆಸಿದ್ದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಪೊಲಿಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಸುಬ್ರಹ್ಮಣ್ಯ ಷಷ್ಠಿಯಂದು ಪೊಲೀಸ್ ವೊಬ್ಬರು ಖಾಸಗಿ ಚಾನಲ್ ನ ಕ್ಯಾಮರ್ ಮನ್ ಮೇಲೆ ಹಲ್ಲೆ ನಡೆಸಿದ್ದರು.
ಡಿ. 9ರಂದು ನಡೆದ ಸುಬ್ರಮಣ್ಯ ಷಷ್ಠಿಯಂದು ನಗರದ ಎಲ್ಲಾ ಠಾಣೆಗಳಿಂದ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.
ಬೆಳಗ್ಗೆ 5 ಗಂಟಯಿಂದ ಅಪರಾಹ್ನ 2 ಗಂಟೆಯವರೆಗೆ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನರಸಿಂಹರಾಜ ಠಾಣೆಯ ಪಿ.ಸಿ.ಲೋಕೇಶ್ ಎಂಬ ಸಿಬ್ಬಂದಿ ವರದಿ ಮಾಡಲು ಬಂದಿದ್ದ ಖಾಸಗಿ ಚಾನಲ್ ನ ಕ್ಯಾಮರಮನ್ ಸತೀಶ್ ರವರೊಂದಿಗೆ ಅತಿರೇಕದಿಂದ ವರ್ತಿಸಿದ್ದಲ್ಲದೆ ಹಿರಿಯ ಅಧಿಕಾರಿಗಳ ಗಮನಕ್ಕೂ ತರದೆ ಕರ್ತವ್ಯದಲ್ಲಿ ತೀವ್ರ ದುರ್ನಡತೆ ಪ್ರದರ್ಶಿಸಿರುವುದು ಸಾಬೀತಾಗಿದೆ.
ಲೋಕೇಶ ಅವರನ್ನು ಇಲಾಖಾ ವಿಚಾರಣೆ ಬಾಕಿ ಇರುವಂತೆ ಅಮಾನತ್ತಿನಲ್ಲಿಡಲಾಗಿದೆ.