ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ದರೋಡೆಕೋರರ ಬಳಿ ಇರಬೇಕಾದ ಎಲ್ಲ ವಸ್ತುಗಳು ಪೆÇಲೀಸಪ್ಪನ ಬಳಿ ಇದೆ ಎಂದರೆ ನಂಬುತ್ತೀರಾ..ಖಂಡಿತ ನಂಬಲೇಬೇಕು.
ಇಲ್ಲೊಬ್ಬ ಪೊಲೀಸ್ ಬಳಿ ಚಾಕು, ಬ್ಲೇಡ್ ಮತ್ತು ಕಾರದ ಪುಡಿ ಇದೆ.
ಇದನ್ನು ಪೊಲೀಸ್ ಏಕೆ ಇಟ್ಟುಕೊಂಡಿದ್ದರು ಎಂಬ ಸತ್ಯ ಪೊಲೀಸರ ತನಿಖೆಯಿಂದಲೇ ತಿಳಿಯಬೇಕಾಗಿದೆ.
ಆತ ಕುಡಿದ ಅಮಲಿನಲ್ಲೂ ಲಾಡ್ಜ್ ಒಂದರ ಮೇಲೆ ದಾಂದಲೆ ನಡೆಸಿದ್ದಾನೆ ಎಂಬ ಮಾಹಿತಿ ದೊರೆುತ್ತಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೋಕಿನ ಬೇಗೂರು ಠಾಣೆಯ ಚಾಲಕ ನಾಗೇಶ್ ಮತ್ತವರ ಸಂಗಡಿಗರು ಲಾಡ್ಜ್ ಗೆ ತೆರಳಿ ಪಾಟ್ ಗಳನ್ನ ಹೊಡೆದು ಹಾಕಿ ಮ್ಯಾನೇಜರ್ ರಾಜೀವ್ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ರಾತ್ರಿ ವೇಳೆ ಚಾಲಕ ನಾಗೇಶ್ ಮತ್ತವರ ಸಂಗಡಿಗರಾದ ತಮ್ಮಡಿ ಮಂಜ, ಟೈಲರ್ ಅಶೋಕ್ ಮತ್ತು ಭರತ್ ಎಂಬುವವರು ಸೇರಿ ಈ ಕೃತ್ಯ ನಡೆಸಿದ್ದಾರೆಂದು ತಿಳಿದು ಬಂದಿದೆ.
ಪೆÇಲೀಸಪ್ಪನ ಬೈಕ್ ಅಲ್ಲಿ ಚಾಕು, ಆ್ಯಕ್ಷನ್ ಬ್ಲೇಡ್, ಕಾರದಪುಡಿ ದೊರೆತಿರುವುದು ಸಾಕಷ್ಟು ಅನುಮಾನಗಳನ್ನ ಹುಟ್ಟುಹಾಕಿದೆ. ಪೆÇಲೀಸರು ತಮ್ಮ ಬೈಕಿನಲ್ಲಿ ಇಂತಹ ಪದಾರ್ಥಗಳನ್ನ ಇಡುವುದು ತಮಾಷೆಯ ಮಾತಲ್ಲ.. ಆದರೂ ಈ ಪದಾರ್ಥಗಳು ಇದೆ ಅಂದರೆ ಪೊಲೀಸ್ ಇಲಾಖೆ ಹೆಚ್ಚಿನ ಮಟ್ಟದಲ್ಲಿ ತನಿಖೆ ನಡೆಸಬೇಕಾಗಿದೆ.
ರಾತ್ರಿ ವೇಳೆಯಲ್ಲಿ ನಡೆಯೋ ಕುಕೃತ್ಯಕ್ಕೆ ಇವರೂ ಬೆಂಬಲಿತರಾಗಿದ್ದಾರೆಯೆ ಎಂಬ ಅನುಮಾನಗಳನ್ನು ಮೂಡಿಸಿದೆ.
ಚಾಮರಾಜನಗರ ಎಸ್ಪಿ ದಿವ್ಯ ಅವರು ಇವರ ವಿರುದ್ಧ ಏನು ಕ್ರಮ ಜರುಗಿಸುತ್ತಾರೋ ಅಥವಾ ನೂತನವಾಗಿ ಬಂದಿರುವ ಐಜಿಪಿ ಯಾವ ಕಠಿಣ ಕ್ರಮ ಕೈಗೊಳ್ಳುತ್ತಾರೊ ಕಾದು ನೋಡಬೇಕಾಗಿದೆ.
ಪೆÇಲೀಸಪ್ಪನ ಬೈಕ್ ನಲ್ಲಿ ಚಾಕು, ಕಾರದಪುಡಿ?!