ಪೊಲೀಸ್ ಕುಟುಂಬಕ್ಕೆ ಸಿಗದ ನ್ಯಾಯ: ಕೊನೆಗೂ ಕಳ್ಳನ  ಪತ್ತೆ ಮಾಡಿದ ಪೊಲೀಸ್ ಪತ್ನಿ

(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ: ಪೊಲೀಸ್  ವಸತಿ ಗೃಹದಲ್ಲಿ ಕಳ್ಳತನವಾಗಿದ್ದರೂ ದೂರು ದಾಖಲಿಸದೆ ರಾಜಿ ಮಾಡಿಸಲು ಪೊಲೀಸರೇ ಮುಂದಾದ ಘಟನೆ ನಗರದಲ್ಲಿ ನಡೆದಿದೆ.

ಕಳ್ಳತನವಾದ ಬಗ್ಗೆ ಪೋಲೀಸ್ ಪತ್ನಿಯೊಬ್ಬರು ದೂರು ನೀಡಲು ಹೋದರೆ ಪಟ್ಟಣ ಪೊಲೀಸರು ದಾಖಲಿಸದೆ ರಾಜೀ ಮಾಡಲು ಹರಸಾಹಸ ಪಟ್ಟಿದ್ದಾರೆ. 

ಅಷ್ಟೆ ಅಲ್ಲ ಪೊಲೀಸ್ ಪತ್ನಿ ಕಳುವಾಗಿದ್ದ ಮಾಲನ್ನು ತಾನೆ ಪತ್ತೆ ಹಚ್ಚಿ ಪೊಲೀಸರಿಗೆ ಚಳಿ ಬಿಡಿಸಿದ್ದಾರೆ.

ಚಾಮರಾಜ ನಗರದ ಪೂರ್ವ ಠಾಣೆ ಹಿಂಭಾಗದಲ್ಲಿರುವ ಪೋಲಿಸ್‌ ವಸತಿ ಗೃಹದಲ್ಲಿ ಈ ಘಟನೆ ನಡೆದಿದೆ.

ಡಿಎಆರ್ ಪೋಲಿಸ್ ಪೇದೆ ಸುರೇಶ್ ಎಂಬುವರ ಮನೆಯಲ್ಲಿ ಚಿನ್ನಾಭರಣ ಕಳ್ಳತನವಾಗಿತ್ತು.

ಮನೆ ಬೀಗ ಹಾಕಿದ ಹಾಗೆಯೇ ಇದೆ.ಆದರೂ ಚಿನ್ನಾಭರಣ‌ ಕಳುವಾಗಿರುವುದು ಗೊತ್ತಾಗಿ ಗಾಬರಿಯಾದ ಸುರೇಶ್ ಪತ್ನಿ ಪಟ್ಟಣ ಠಾಣೆಗೆ ದೌಡಾಯಿಸಿ ದೂರು ಕೊಟ್ಟಿದ್ದಾರೆ.

ಆದರೆ ಪೊಲೀಸರು ದೂರು ದಾಖಲಿಸಿಕೊಳ್ಳದೆ ಪುಕ್ಕಟ್ಟೆ ಸಲಹೆ ನೀಡಿ ಕಳಿಸಿದ್ದಾರೆ‌.

ಬೀಗ ಹಾಕಿದಂತೆ ಇದೆ ಎಂದರೆ ಕಳ್ಳ ಮನೆ ಒಳಗಿನವನೇ ಹೊರತು ಹೊರಗಿನವನಾಗುವುದಕ್ಕೆ ಸಾಧ್ಯವೇ ಇಲ್ಲ ಎಂಬುದು ಪೋಲಿಸರ ಸಿದ್ಧ ಸೂತ್ರ.

ಅದರಂತೆ ನಿನ್ನ ಗಂಡನೇ ದುಶ್ಚಟಕ್ಕೆ ದಾಸನಾಗಿ ಈ ಕೃತ್ಯ ಮಾಡಿರಬೇಕು ಎಂದು ಪೊಲೀಸ್ ಪತ್ನುಗೆ ಅವಮಾನಿಸಿ ಕಳಿಸಿದ್ದಾರೆ.

ತನ್ನ ಪತಿಯ ಮೇಲಿನ ಅಪಾರ ನಂಬಿಕೆ ,ಕಳ್ಳತನದ ನೋವು,  ಪಟ್ಟಣ ಠಾಣೆ ಪೋಲಿಸರ ಚುಚ್ಚು ಮಾತಿಗೆ ಎದೆಗುಂದದ ಪೊಲೀಸಪ್ಪನ ಹೆಂಡತಿ ತಾನೆ ತನಿಖೆಗೆ ಇಳಿದಿದ್ದಾರೆ.

ಪಟ್ಟಣದ ಚಿನ್ನದ ಅಂಗಡಿಗಳನ್ನು ಎಡತಾಕಿ ಯಾವ ಅಂಗಡಿಗಳಲ್ಲಿ ಚಿನ್ನಾಭರಣ ಗಿರವಿ ಇಟ್ಟು ಕೊಳ್ಳುತ್ತಾರೆ ಎಂಬುದನ್ನು ವಿಚಾರಿಸಿದ್ದಾಡಿವೈಸ್ತಹ ಅಂಗಡಿ ಚಿಕ್ಕಂಗಡಿ ಬೀದಿಯಲ್ಲಿರುವುದು ಗೊತ್ತಾಗಿದೆ.

ಅಂಗಡಿಗೆ ಹೋಗಿ ಅಡವಿಟ್ಟಿದ್ದ ಆಭರಣಗಳನ್ನು  ಬಡ್ಡಿ ಕೊಟ್ಟು ಬಿಡಿಸಿಕೊಳ್ಳುತ್ತೇವೆ ಎಂದಾಗ ಅಂಗಡಿಯವನು ಇದಕ್ಕೆ ಒಪ್ಪಿ ಹಣ ಕೊಟ್ಟು ಬಿಡಿಸಿಕೊಳ್ಳಿ ಎಂದಿದ್ದಾನೆ.

ತನ್ನ ಗಂಡನನ್ನೇ ಕಳ್ಳ ಎಂದು ಬಿಂಬಿಸಿದ ಪಟ್ಟಣ ಠಾಣೆ ಪೋಲಿಸರನ್ನು ಸ್ಥಳಕ್ಕೆ ಕರೆಸಿದ ಮಹಿಳೆ ಆಕಾಶ ಭೂಮಿ ಒಂದು ಮಾಡಿದ್ದಾರೆ.

ಇದರಿಂದ ಭಾರಿ ಮುಜುಗರ ಅನುಭವಿಸಿದ ಪೋಲಿಸರು ಶೀಘ್ರ ಚಿನ್ನಾಭರಣ ವಶಕ್ಕೆ ಪಡೆದು ಒಪ್ಪಿಸುವುದಾಗಿ ನಂಬಿಸಿ ಪರಿಸ್ಥಿತಿ ನಿಭಾಯಿಸಿದ್ದಾರೆ.

ಆಕೆ ನಂಬಿ ಚಿನ್ನಾಭರಣ ಬರುತ್ತದೆ ಎಂದು ಚಾತಕ ಪಕ್ಷಿಯಂತೆ ಕಾದಿದ್ದಷ್ಟೇ, ಇದುವರೆಗೂ ಆಕೆಯ ಕೈಗೆ ಆಭರಣಗಳು ಬಂದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಪತಿಯ ಮಾನ ಹಾಗೂ ಜೀವನ ಉಳಿಸಿದ್ದಲ್ಲದೆ ಪತಿ ಪೊಲೀಸಾದರೂ ಆತನನ್ನೆ ಕಳ್ಳ ಎಂದು ಬಿಂಬಿಸಿದ ಪೊಲೀಸರಿಗೆ ತನ್ನ ಗಂಡನ ಬಗ್ಗೆ ಕೀಳಾಗಿ ಮಾತಾಡದಂತೆ‌ ಮಹಿಳೆ ಬುದ್ದಿ ಕಲಿಸಿದ್ದಾರೆ

ಅಲ್ಲದೆ ತಾನೆ ಕಳುವು ಮಾಲು ಪತ್ತೆ ಮಾಡಿ ಪತಿಯ ಮೇಲಿನ ಆರೋಪವನ್ನೂ ತೊಡೆದು ಹಾಕಿದ್ದಾರೆ.

ಅಡಮಾನ ಇಟ್ಟದ್ದು ಯಾರು: ಮನೆಯಲ್ಲಿ ಇರೊ ಪದಾರ್ಥ ಕಳ್ಳತನವಾಗಲು ಕಾರಣ ಯಾರು? ಇದ್ದ ಮೂವರಲ್ಲಿ ಕದ್ದವರು ಯಾರು ಎಂಬ ಪ್ರಶ್ನೆ ಎದುರಾಗಿದೆ.

ಆದರೆ ಅದೇ ವಸತಿನಿಲಯದಲ್ಲಿನ  ಮುಖ್ಯ ಪೇದೆಯ ಮಗನ ಮೇಲೆ ಅನುಮಾನ ವ್ಯಕ್ತಪಡಿಸಲಾಗಿತ್ತು.

ನೊಂದ ಮಹಿಳೆಗೆ ನ್ಯಾಯ ಕೊಡಬೇಕಾದ ಪೊಲೀಸರು ಆ ಮಹಿಳೆಗೆ ಅವಹೇಳನ ಮಾಡಿ ಕಳಿಸಿದ್ದರು.

ಇದರಿಂದ ಮನನೊಂದ ಆಕೆ ಈ ಕೃತ್ಯ ಯಾರಿಂದ ಆಗಿದೆ..ಹೇಗಾಗಿಗೆ.‌ಎಲ್ಲಿ ಯಾರು ಅಡವಿಟ್ಟಿರು ಎಂಬುದನ್ನ ಪತ್ತೆ ಹಚ್ಚಿದ್ದು ವಿಶೇಷವಾದರೂ ಆರೋಪಿ ಪೊಲೀಸರ ಮಗ ಎಂಬ ಕಾರಣಕ್ಕಾಗಿ ಇದುವರೆಗೂ ಪ್ರಕರಣ ದಾಖಲಿಸದೆ ಪಟ್ಟಣ ಪೊಲೀಸರು ನಿದ್ದೆಗೆ ಜಾರಿದ್ದಾರೆ.

ಚಾಮರಾಜನಗರ ಜಿಲ್ಲಾ ಪೋಲೀಸ್ ಅದೀಕ್ಷಕಿ ಪದ್ಮಿನಿ ಸಾಹೊ ಹಾಗೂ ಡಿ ವೈ ಎಸ್ ಪಿ ಪ್ರಿಯದರ್ಶಿನಿ ಇಬ್ಬರೂ ಮಹಿಳಾ ಅದಿಕಾರಿಯಾಗಿದ್ದರೂ ಪೊಲೀಸಪ್ಪನ ಹೆಂಡತಿಗೆ ನ್ಯಾಯ ಕೊಡಿಸಲಾಗದೆ ಮೌನವಾಗಿರುವುದು ದುರ್ದೈವ.