ವರದಿ: ರಾಮಸಮುದ್ರಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಚಾಮರಾಜನಗರದಲ್ಲಿ ದಿನೆ ದಿನೇ ಜೂಜಾಟ ಹೆಚ್ಚಾಗುತ್ತಿದೆ. ವಿಪರ್ಯಾಸವೆಂದರೆ ಇದಕ್ಕೆ ಪೆÇಲೀಸರೇ ಸಾಥ್ ನೀಡಿರುವುದು.
ರಾಮಸಮುದ್ರ ಪೆÇಲೀಸರು ಗುಂಪೆÇಂದರ ಮೇಲೆ ದಾಳಿ ನಡೆಸಿ ಜೂಜಾಟದಲ್ಲಿ ತೊಡಗಿದ್ದ ಸುಮಾರು 14 ಜನರನ್ನು ಬಂಧಿಸಿದ್ದಾರೆ.
ಆದರೆ ಕೆಲ ಪೆÇಲೀಸರೂ ಕೂಡ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಚಾಮರಾಜನಗರ ಪೂರ್ವ ಗ್ರಾಮಾಂತರ ಪೆÇಲೀಸರು ಕ್ಲಬ್ ಒಂದಕ್ಕೆ ಖಚಿತ ವರ್ತಮಾನದ ಮೇಲೆ ದಾಳಿ ನಡೆಸಿ ಅಲ್ಲಿದ್ದ 14 ಜನರನ್ನ ಬಂಧಿಸಿ ಪಣಕ್ಕಿಟ್ಟಿದ್ದ ಹಣವನ್ನ ವಶಕ್ಕೆ ಪಡೆದಿದ್ದಾರೆ.
ಲಭ್ಯವಾದ ಮಾಹಿತಿ ಪ್ರಕಾರ ತಹಶೀಲ್ದಾರ್ ರವರ ಚಾಲಕನಿಗೆ ಸೇರಿದ ಕ್ಲಬ್ ನಲ್ಲಿ ಕೆಲ ಪೆÇಲೀಸರು ಸೇರಿ ಸಾಮೂಹಿಕ ಜೂಜಾಟದಲ್ಲಿ ಭಾಗಿಯಾಗಿದ್ದಾರೆ.
ಚಾಮರಾಜನಗರದ ಪೆÇಲೀಸ್ ವರಷ್ಠಾಧಿಕಾರಿಯವರು ಜೂಜಾಡಿದವರ ವಿರುದ್ಧ ಮುಲಾಜಿಲ್ಲದೆ ಕಟ್ಟುನಿಟ್ಟಿನ ಕ್ರಮ ಜರುಗಿಸುತ್ತೇವೆ ಎಂದು ಜಿ ನ್ಯೂಸ್ 5 ಗೆ ತಿಳಿಸಿದ್ದಾರೆ.