ಉಪ ಚುನಾವಣೆ ಬಿಸಿ: ಬಿಜೆಪಿ-ಜೆಡಿಎಸ್ ಮೈತ್ರಿ ?

ಬೆಂಗಳೂರು: ಉಪ ಚುನಾವಣೆ ಮತ್ತು ವಿಧಾನ ಪರಿಷತ್‍ನ 4 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಕೊರೊನಾ ನಡುವೆಯೂ ರಾಜಕೀಯದಾಟ ಜೋರಾಗಿದೆ.
ನಾಯಕರ ನಡುವಿನ ವಾಗ್ವಾದ ಆರಂಭದಲ್ಲೇ ತಾರಕಕ್ಕೇರಿರುವ ಮಧ್ಯೆ ಮೈತ್ರಿ ವಿಚಾರವೂ ಸದ್ದು ಮಾಡುತ್ತಿದೆ.
ರಾಜಕಾರಣಿಗಳು ಸಮಯಕ್ಕೆ ತಕ್ಕಂತೆ ಸ್ನೇಹ-ದ್ವೇಷ ನಿಭಾಯಿಸುವಲ್ಲಿ ನಿಸ್ಸೀಮರು.
ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್ ಮೈತ್ರಿಗೆ ಯೋಗ್ಯ ಪಕ್ಷವಲ್ಲ ಎಂದು ಹೇಳಿರುವುದು ಮೇಲಿನ ವಾಕ್ಯವನ್ನು ಸಾಕ್ಷಿಕರಿಸುವಂತಿದೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಉಪ ಚುನಾವಣೆಯಲ್ಲಿ ಯಾರ ಜತೆಗೂ ಮೈತ್ರಿ ಮಾಡುವುದಿಲ್ಲ ಎಂದು ಹೇಳಿರುವುದಕ್ಕೆ ಹೆಚ್.ಡಿ.ಕೆ. ಈ ರೀತಿ ತಿರುಗೇಟು ನೀಡಿದ್ದಾರೆ.
ಆದರೆ ರಾಜಕೀಯದಾಟ ಬೇರೆಯೇ ಇದೆಯೋ ಎಂಬ ಗುಮಾನಿ ಮಾತ್ರ ಇದ್ದೇ ಇದೆ.
ಕಾರಣ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಹೆಚ್.ಡಿ.ಕೆ. ಭೇಟಿಯಾಗಿರುವುದು ಎಲ್ಲಾ ಸಾದ್ಯತೆಯನ್ನು ಊಹಿಸಲು ವೇದಿಕೆ ಕಲ್ಪಿಸಿದೆ.
ನಮ್ಮಿಬ್ಬರ ಭೇಟಿಗೆ ವಿಶೇಷ ಅರ್ಥ ನೀಡುವುದು ಬೇಡ ಎಂದು ಹೆಸ್.ಡಿ.ಕೆ. ಎಂದಿದ್ದರಾದೂ ಇದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಉಪ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ನಡುವೆ ಮೈತ್ರಿ ಏರ್ಪಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.