ಶ್ರೀರಂಗಪಟ್ಟಣ: ಇತಿಹಾಸ ಮತ್ತು ಪುರಾಣ ಪ್ರಸಿದ್ಧ ಶ್ರೀರಂಗಪಟ್ಟಣಕ್ಕೆ ಹಿಂದಿನ ವೈಭವವನ್ನು ಮತ್ತೆ ಮರುಕಳಿಸುವಂತೆ ಮಾಡಲಾಗುವುದು, ಇಡೀ ಪ್ರಪಂಚದಲ್ಲಿ ಶ್ರೀರಂಗಪಟ್ಟಣವನ್ನು ಗುರುತಿಸುವಂತೆ ಮಾಡುವುದೇ ನನ್ನ ಮೊದಲ ಗುರಿ ಎಂದು ನೂತನ ಶಾಸಕ ರಮೇಶ್ ಬಾಬು ಬಂಡಿ ಸಿದ್ದೇಗೌಡ ತಿಳಿಸಿದರು
ನೂತನ ಶಾಸಕರ ಕೊಠಡಿ ಉದ್ಘಾಟನಾ ಪೂಜಾ ಕಾರ್ಯಕ್ರಮ ನೆರವೇರಿದ ನಂತರ ಅವರು ಮಾತನಾಡಿದರು
ನಾನು ಶಾಸಕನಾಗಿ ಆಯ್ಕೆ ಆಗಿರುವುದು ತಾಲೂಕಿನ ಜನರಿಂದ ಅದಕ್ಕಾಗು ನಾನು ಅದಕ್ಕೆ ಚಿರಋಣಿ ಎಂದು ಹೇಳಿದರು.
ನನ್ನ ಕೆಲಸ ಏನಿದ್ದರೂ ಶ್ರೀರಂಗಪಟ್ಟಣ ಕ್ಷೇತ್ರದ ಅಭಿವೃದ್ಧಿ. ಇಂಡಿಯಾದಲ್ಲಿ ಶ್ರೀರಂಗಪಟ್ಟಣವನ್ನು ಗುರುತಿಸುವಂತೆ ಮಾಡುವುದು ನನ್ನ ಮೂಲ ಉದ್ದೇಶ ಎಂದು ಸ್ಪಷ್ಟಪಡಿಸಿದರು.
ಶ್ರೀರಂಗಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಸದಾ ಶ್ರಮಿಸುತ್ತೇನಡ ಎಂದು ಹೇಳಿ ನನ್ನನ್ನು ಗೆಲ್ಲಿಸಿದ ಶ್ರೀರಂಗಪಟ್ಟಣದ ಜನತೆಗೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ನುಡಿದರು.
ರಮೇಶ್ ಬಾಬು ಅವರತಾಯಿ ವಿಜಯ ಲಕ್ಷ್ಮಮ್ಮ.ತಂದೆ ಬಂಡಿ ಸಿದ್ದೇಗೌಡರು.
ಇವರು ಮೂಲತಃ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದವರು. ತಂದೆ ಕೂಡ ಶ್ರೀರಗಪಟ್ಟಣದ ಶಾಸಕರಸಗಿ ಒಳ್ಳೆಯ ಕೆಲಸ ಮಾಡಿದ್ದರು.
ನಂತರ ಲಕ್ಷಮ್ಮ ಬಂಡಿ ಸಿದ್ದೇಗೌಡ ಅವರು ಕೂಡ ರಾಜಕೀಯಕ್ಕೆ ಧುಮುಕಿದರು. ಮೊದಲ ಪ್ರಯತ್ನದಲ್ಲೇ ಗೆದ್ದು ಬೀಗಿದರು.
2018ರ ವಿಧಾನಸಭಾ ಚುನಾವಣೆಯಲ್ಲಿ ರಮೇಶ್ ಬಾಬು ಪರಾಜಯಗೊಂಡರೂ ದೃತಿಗೆಡದೆ ಪ್ರತಿ ಗ್ರಾಮ, ಹಳ್ಳಿಗಳನ್ನ ಸತ್ತಿ ಪಕ್ಷ ಸಂಘಟನೆ ಮಾಡಿ ಜನರ ಕಷ್ಟಕ್ಕೆ ಸ್ಪಂದಿಸಿ 2023ರ ಚುನಾವಣೆಯಲ್ಲಿ ಅಭೂತಪೂರ್ವ ಜಯಗಳಿಸಿ ಕ್ಷೇತ್ರದ ಶಾಸಕರಾಗಿ ಆಯ್ಕೆ ಆಗಿದ್ದಾರೆ.
ಸರಳ, ಸಜ್ಜನಿಕೆ ವ್ಯಕ್ತಿಯಾಗಿದ್ದು ಇವರು ಜನರ ಕಷ್ಟಕ್ಕೆ ಬಹು ಬೇಗ ಸ್ಪಂದನೆ ಮಾಡುತ್ತಾರೆ.
ಜನಸಾಮಾನ್ಯನಂತೆ ಯಾವುದೇ ಆಡಂಬರವಿಲ್ಲದೆ ಮೇಲು, ಕೀಳು ಎಂಬ ಭೇದವಿಲ್ಲದೆ ಸರ್ವ ಜನಾಂಗದ ಜೊತೆ ಒಡನಾಟ ಇಟ್ಟುಕೊಂಡಿದ್ದಾರೆ.ಹಾಗಾಗಿಯೇ ಇಲ್ಲಿನ ಅವರನ್ನು ಆಯ್ಕೆ ಮಾಡಿದ್ದಾರೆ.