ಯಾದಗಿರಿ: ಪಶು ಸಂಗೋಪನೆ ಮತ್ತು ಬೀದರ-ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರಿಗೆ ಕೊರೊನಾ ಸೋಂಕು ದೃಢ ಪಟ್ಟಿದೆ.
ಬುಧವಾರ ಸಚಿವರು ಪರೀಕ್ಷೆಗೊಳಗಾದಾಗ ಕೊರೊನಾ ಸೋಂಕು ಧೃಢಪಟ್ಟಿದೆ.
ಸಚಿವರೊಂದಿಗೆ ಅವರ ಅಣ್ಣನ ಮಗ ದಿಲೀಪ್ ಚವ್ಹಾಣ ಅವರಿಗೂ ಸೋಂಕು ಧೃಢಪಟ್ಟಿದೆ.
ಮಂಗಳವಾರ ಚವ್ಹಾನ ಅವರ ಕಾರು ಚಾಲಕ, ಗನ್ ಮ್ಯಾನ್, ಆಪ್ತ ಸಹಾಯಕರಲ್ಲಿ ಕೊರೊನಾ ಕಂಡು ಬಂದ ಕಾರಣ ಸಚಿವರು ಕ್ವಾರಂಟೈನ್ ಗೆ ಒಳಗಾಗಿದ್ದರು.
ಇತ್ತೀಚೆಗೆ ಸಚಿವರ ಸಂಪರ್ಕಕ್ಕೆ ಬಂದವರು ಎಚ್ಚರಿಕೆ ವಹಿಸಬೇಕೆಂದು ಸಚಿವರು ಮನವಿ ಮಾಡಿದ್ದಾರೆ.